ಕರ್ನಾಟಕ

karnataka

ETV Bharat / state

ಕೊರೊನಾಗೆ ಬೆಳಗಾವಿಯಲ್ಲಿ 10 ಬಲಿ: 60 ಜನರಿಗೆ ವಕ್ಕರಿಸಿದ ಸೋಂಕು

ಕುಂದಾ ನಗರಿಯಲ್ಲಿ ಈವರೆಗೂ 1,054 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ಸದ್ಯ 2,542 ಆ್ಯಕ್ಟಿವ್ ಕೇಸ್‌ಗಳಿವೆ.

ಬೆಳಗಾವಿ
ಬೆಳಗಾವಿ

By

Published : Aug 3, 2020, 9:05 PM IST

ಬೆಳಗಾವಿ:ಜಿಲ್ಲೆಯಲ್ಲಿ ಕೊರೊನಾ ಮರಣ‌ ಮೃದಂಗ ಮುಂದುವರಿದಿದೆ. ಒಂದೇ ದಿನಕ್ಕೆ ಕೊರೊನಾಗೆ 10 ಸೋಂಕಿತರು ಮೃತರಾಗಿದ್ದಾರೆ.

ಈ ಮೂಲಕ ಸೋಂಕಿಗೆ ಮೃತಪಟ್ಟವರ ಸಂಖ್ಯೆ 85ಕ್ಕೆ ಏರಿಕೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 60 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3,681 ಕ್ಕೇರಿಕೆಯಾಗಿದೆ.

ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 29 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 1,054 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ಸದ್ಯ 2,542 ಆ್ಯಕ್ಟಿವ್ ಕೇಸ್‌ಗಳಿವೆ.

ABOUT THE AUTHOR

...view details