ಕರ್ನಾಟಕ

karnataka

ETV Bharat / state

ಕೋವಿಡ್​ -19 ಎಫೆಕ್ಟ್: ಕಿತ್ತೂರು ಉತ್ಸವ ಒಂದೇ ದಿನಕ್ಕೆ ಸೀಮಿತ - Covid-19 Effect Simply Kittur Festival Celebration

ಕಿತ್ತೂರು ಸಂಸ್ಥಾನದ ಉಳಿವಿಗಾಗಿ ವೀರರಾಣಿ ಚೆನ್ನಮ್ಮ 1824ರಲ್ಲಿ ತನ್ನ ಸೈನ್ಯದೊಂದಿಗೆ ಬ್ರಿಟಿಷರೊಂದಿಗೆ ಸೆಣಸಾಡಿ, ವಿಜಯ ಕಹಳೆ ಮೊಳಗಿಸಿದ ದಿನದ ಅಂಗವಾಗಿ ಕಿತ್ತೂರು ಸಾಂಸ್ಕೃತಿಕ ಉತ್ಸವವನ್ನು ಆಚರಣೆ ಮಾಡಲಾಗುತ್ತದೆ.

covid-19-effect-simply-kittur-festival-celebration
ಒಂದೇ ದಿನಕ್ಕೆ ಸಿಮಿತವಾದ ಕಿತ್ತೂರು ಉತ್ಸವ

By

Published : Oct 23, 2020, 11:51 AM IST

Updated : Oct 23, 2020, 12:36 PM IST

ಬೆಳಗಾವಿ: ಈ ಬಾರಿ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಕಿತ್ತೂರು ಸಾಂಸ್ಕೃತಿಕ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ.

ಕಿತ್ತೂರು ಸಂಸ್ಥಾನದ ಉಳಿವಿಗಾಗಿ ವೀರರಾಣಿ ಚೆನ್ನಮ್ಮ 1824ರಲ್ಲಿ ತನ್ನ ಸೈನ್ಯದೊಂದಿಗೆ ಬ್ರಿಟಿಷರೊಂದಿಗೆ ಸೆಣಸಾಡಿ, ವಿಜಯ ಕಹಳೆ ಮೊಳಗಿಸಿದ ದಿನದ ಅಂಗವಾಗಿ ಕಿತ್ತೂರು ಸಾಂಸ್ಕೃತಿಕ ಉತ್ಸವವನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಅ.23 ರಿಂದ 25ರವರೆಗೆ 3 ದಿನಗಳ ಕಾಲ‌ ಅದ್ಧೂರಿಯಾಗಿ‌ ಉತ್ಸವ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ವೈರಸ್ ಕಾರಣದಿಂದಾಗಿ ‌‌ಸರಳ ಆಚರಣೆಗೆ ಸರ್ಕಾರ‌ ಮುಂದಾಗಿದೆ. ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಈ ಸಲ ಒಂದೇ ದಿನಕ್ಕೆ ಸೀಮಿತವಾಗಿ ಸರಳ ಹಾಗೂ ಸಾಂಕೇತಿಕವಾಗಿ ಉತ್ಸವ ಆಚರಣೆ ನಡೆಯುತ್ತಿದೆ.

ಕಿತ್ತೂರು ಉತ್ಸವ ಒಂದೇ ದಿನಕ್ಕೆ ಸೀಮಿತ

ಮರೆಯಾದ ಸಂಭ್ರಮ: ಪ್ರತಿವರ್ಷ ಮೂರು ದಿನಗಳ‌ ಕಾಲ ನಡೆಯುತ್ತಿದ್ದ, ಕಿತ್ತೂರು ಉತ್ಸವ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರ ದಂಡೇ ಹರಿದುಬರುತ್ತಿತ್ತು. ಜಾನಪದ ಕಲಾವಾಹಿನಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರು ಜಾನಪದ ಕಲೆಗಳನ್ನು ಅನಾವರಣಗೊಳಿಸುತ್ತಿದ್ದರು. ಸಂಗೀತದ ರಸದೌತಣ ಉಣಬಡಿಸುತ್ತಿದ್ದರು. ವಿವಿಧ ಗೋಷ್ಠಿಗಳಲ್ಲಿ ಸಾಹಿತಿಗಳು ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು, ಕ್ರೀಡಾಕೂಟಗಳು ಜನರನ್ನು ಸೆಳೆಯುತ್ತಿದ್ದವು.

ಅದರಲ್ಲೂ, ಜಟ್ಟಿ ಕಾಳಗ, ಕುಸ್ತಿ ಪ್ರೇಮಿಗಳ ಕುತೂಹಲ ಹೆಚ್ಚಿಸುತ್ತಿತ್ತು. ಆದರೆ, ಈ ಬಾರಿ ಸಂಭ್ರಮ ಮರೆಯಾಗಿದೆ. ಸರಳ ಉತ್ಸವ ಹಿನ್ನೆಲೆ ನೋಡಲು ಜನರಿಲ್ಲದೆ ಚೆನ್ನಮ್ಮ ಕೋಟೆ, ಚೆನ್ನಮ್ಮ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ. ಹೀಗಾಗಿ ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರ ಒಂದೇ ದಿನಕ್ಕೆ ಸೀಮಿತವಾಗಿ ಸರಳವಾಗಿ ಉತ್ಸವ ಆಚರಿಸುತ್ತಿರುವುದು ಉತ್ತಮ ನಿರ್ಧಾರವಾದರೂ, ಕಿತ್ತೂರು ಸಂಸ್ಥಾನಕ್ಕೆ ಸೇರಿದ ಸ್ಮಾರಕಗಳ ರಕ್ಷಣೆಗೆ ಸರ್ಕಾರ ಒತ್ತು ನೀಡಬೇಕು. ಸರ್ಕಾರವೇ ರಚಿಸಿದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಕಿಕೊಂಡಿರುವ ಯೋಜನೆಗಳು ತ್ವರಿತವಾಗಿ ಕಾರ್ಯರೂಪಕ್ಕೆ ಬರಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Last Updated : Oct 23, 2020, 12:36 PM IST

For All Latest Updates

ABOUT THE AUTHOR

...view details