ಚಿಕ್ಕೋಡಿ: ಕೋವಿಡ್-19 ಭೀತಿ ಹಿನ್ನೆಲೆ ಜಿಲ್ಲೆಯ ಹುಕ್ಕೇರಿ ಪಟ್ಟಣದ ನ್ಯಾಯಾಲಯಕ್ಕೆ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ನಿರ್ಬಂಧ ಹೇರಲಾಗಿದೆ.
ಹುಕ್ಕೇರಿ ಕೋರ್ಟ್ಗೂ ತಟ್ಟಿದ ಕೋವಿಡ್ - 19 ಬಿಸಿ - ಕೊರೊನಾ ವೈರಸ್ ಭೀತಿ
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ನ್ಯಾಯಾಲಯಕ್ಕೂ ಕೊರೊನಾ ಭೀತಿ ಉಂಟಾಗಿದೆ. ತ್ವರಿತ ಹಾಗೂ ಜಾಮೀನು ಅರ್ಜಿಗಳನ್ನು ಹೊರತು ಪಡಿಸಿ ಎಲ್ಲವುಗಳನ್ನು ಮುಂದೂಡಲಾಗಿದೆ ಎಂದು ನ್ಯಾಯಾಲಯ ಪ್ರಕಟಣೆಯಲ್ಲಿ ಹೇಳಿದೆ.
ಹುಕ್ಕೇರಿ ನ್ಯಾಯಾಲಯಕ್ಕೂ ತಟ್ಟಿದ ಕೋವಿಡ್-19 ಬಿಸಿ
ನ್ಯಾಯಾಲಯದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಮುಂದೂಡಿದ್ದು, ತ್ವರಿತ ಪ್ರಕರಣ ಹಾಗೂ ಜಾಮೀನು ಅರ್ಜಿಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುವುದು. ಆ ಕೇಸ್ಗೆ ಸಂಬಂಧಿಸಿದ ವಕೀಲರು ಹಾಗೂ ಕಕ್ಷಿದಾರರಿಗೆ ಅವಕಾಶ ನೀಡಲಾಗುವುದು ಎಂದು ನ್ಯಾಯಾಲಯ ಸೂಚಿಸಿದೆ.