ಕರ್ನಾಟಕ

karnataka

ETV Bharat / state

'ಜಾರಕಿಹೊಳಿ ಸಹೋದರರು ನಮ್ಮ ನೆರವಿಗೆ ಬಾರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ' - ಬೆಳಗಾವಿ

ಜಾರಕಿಹೊಳಿ ಕುಟುಂಬದ ಐವರು ಸಹೋದರರು ನಮ್ಮ ನೆರವಿಗೆ ಧಾವಿಸಿ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗೋಕಾಕ ತಾಲೂಕಿನ ಲಗಮೇಶ್ವರ ಗ್ರಾಮದ ಬಸವ್ವ ಯಲ್ಲಪ್ಪ ಕೊಪ್ಪದ ಹಾಗೂ ಯಲ್ಲಪ್ಪ ಕೊಪ್ಪದ ದಂಪತಿ ಎಚ್ಚರಿಕೆ ನೀಡಿದ್ದಾರೆ.

The couple appealed to DC
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ದಂಪತಿಗಳು

By

Published : Jul 30, 2020, 3:05 PM IST

Updated : Jul 30, 2020, 3:34 PM IST

ಬೆಳಗಾವಿ: ರಾಜು ತಳವಾರ ಎಂಬ ವ್ಯಕ್ತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಜಾರಕಿಹೊಳಿ ಸಹೋದರರು ನಮ್ಮ ಸಹಾಯಕ್ಕೆ ಧಾವಿಸಿ ನಾಳೆ 11 ಗಂಟೆಯೊಳಗೆ ಸೂಕ್ತ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಗೋಕಾಕ್ ತಾಲೂಕಿನ ಅಂಕಲಗಿ ಪೊಲೀಸ್ ಠಾಣೆ ಎದುರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ದಂಪತಿಗಳು

ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಗೋಕಾಕ ತಾಲೂಕಿನ ಲಗಮೇಶ್ವರ ಗ್ರಾಮದ ಬಸವ್ವ ಯಲ್ಲಪ್ಪ ಕೊಪ್ಪದ ಹಾಗೂ ಯಲ್ಲಪ್ಪ ಕೊಪ್ಪದ ಎಂಬ ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಇವರಿಬ್ಬರು ಹಲವು ವರ್ಷಗಳಿಂದ ತರಕಾರಿ ಮಾರಾಟ ಮಾಡಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿಕೊಂಡು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ಆದರೆ, ರಾಜು ತಳವಾರ ಎಂಬುವವರು ಪದೇ ಪದೇ ಹಲ್ಲೆ ಮಾಡುತ್ತಿದ್ದಾರೆ. ಇದೀಗ ಆತ ಮಗನನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ಈ ಕುರಿತು ಅಂಕಲಗಿ ಪೊಲೀಸರಿಗೆ ದೂರು ನೀಡಲು ಹೋದ್ರೂ ದೂರು ಸ್ವೀಕರಿಸುತ್ತಿಲ್ಲ ಎಂದು ದೂರಿದ್ದಾರೆ.

ಹೀಗಾಗಿ ಜಾರಕಿಹೊಳಿ ಸಹೋದರರು ನಮ್ಮ ನೆರವಿಗೆ ಧಾವಿಸಿ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Last Updated : Jul 30, 2020, 3:34 PM IST

ABOUT THE AUTHOR

...view details