ಬೆಳಗಾವಿ:ಜಿಲ್ಲೆಯಲ್ಲಿ ಇಂದು ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಆರಂಭವಾಗಿದೆ. ಮತದಾನಕ್ಕೂ ಮೊದಲು ಚುನಾವಣೆಗೆ ಸ್ಪರ್ಧಿಸಿರುವ ದಂಪತಿ ಮತಪೆಟ್ಟಿಗೆಗೆ ಪೂಜೆ ಸಲ್ಲಿಸಿದ ಘಟನೆ ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್. ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ: ಕಣದಲ್ಲಿರುವ ದಂಪತಿಯಿಂದ ಮತ ಪೆಟ್ಟಿಗೆಗೆ ಪೂಜೆ - couple on worshiping a ballot box
ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್ ವಾರ್ಡ್ ನಂ. 2ಕ್ಕೆ ಸ್ಪರ್ಧಿಸಿರುವ ಸುಧೀರ ಪಾಟೀಲ್, ಜ್ಯೋತಿ ಪಾಟೀಲ್ ದಂಪತಿ ಮತಪೆಟ್ಟಿಗೆಗೆ ಪೂಜೆ ಸಲ್ಲಿಸಿದರು.
ಮತಪೆಟ್ಟಿಗೆಗೆ ಪೂಜೆ ಸಲ್ಲಿಸಿದ ಚುನಾವಣಾ ಕಣದಲ್ಲಿರುವ ದಂಪತಿ
ಕಂಗ್ರಾಳಿ ಕೆ.ಹೆಚ್ ವಾರ್ಡ್ ನಂ. 2ಕ್ಕೆ ಸ್ಪರ್ಧಿಸಿರುವ ಸುಧೀರ ಪಾಟೀಲ್ ಹಾಗೂ ಜ್ಯೋತಿ ಪಾಟೀಲ್ ದಂಪತಿ ಮತಪೆಟ್ಟಿಗೆಗೆ ಪೂಜೆ ಸಲ್ಲಿಸಿದರು. ಬಳಿಕ ಚುನಾವಣಾ ಸಿಬ್ಬಂದಿಗೆ ಸಿಹಿ ಹಂಚಿದರು. ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ಪುರುಷ ಕೋಟಾದಡಿ ಈ ಪತಿ - ಪತ್ನಿ ಸ್ಪರ್ಧಿಸಿದ್ದಾರೆ.