ಕರ್ನಾಟಕ

karnataka

ETV Bharat / state

ಉಪಚುನಾವಣೆ ಮತದಾನಕ್ಕೆ ಕ್ಷಣಗಣನೆ.. ಮತಗಟ್ಟೆಯತ್ತ ಸಿಬ್ಬಂದಿ.. - ಗೋಕಾಕ್ ಕ್ಷೇತ್ರದ ಉಪಚುನಾವಣೆ

ನಾಳೆ ನಡೆಯಲಿರುವ ಉಪಚುನಾವಣೆಗೆ ಸಕಲವೂ ಸಿದ್ಧಗೊಂಡಿದೆ. ಮತದಾನಕ್ಕೆ ಕ್ಷಣಗಣನೆ ಶುರುವಾದಂತಾಗಿದೆ. ತೀವ್ರ ಕುತೂಹಲ ಮೂಡಿಸಿರುವ ಗೋಕಾಕ ಕ್ಷೇತ್ರದಲ್ಲಿ ಮತದಾನಕ್ಕೆ ಎಲ್ಲವೂ ತಯಾರಾಗಿದೆ.

By election in ghokak
ಉಪಚುನಾವಣೆಗೆ ಸಿದ್ಧಗೊಂಡ ಅಖಾಡ

By

Published : Dec 4, 2019, 4:13 PM IST

ಗೋಕಾಕ:ಡಿಸೆಂಬರ್ 5ರ ಗೋಕಾಕ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನಡೆಯುವ ಮತದಾನಕ್ಕೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆಯಿಂದಲೇ ಸಿಬ್ಬಂದಿ ಮತಪೆಟ್ಟಿಗೆಯೊಂದಿಗೆ ತಮ್ಮ ಮತಗಟ್ಟೆ ಕಡೆಗೆ ತೆರಳುತ್ತಿದ್ದಾರೆ.

ಗೋಕಾಕ್ ವಿಧಾನಸಭಾ ಕ್ಷೇತ್ರದ ಒಟ್ಟು 2,42,124 ಮತದಾರರಲ್ಲಿ, ಪುರುಷ-1,19,737, ಮಹಿಳಾ-1,22,373, ಇತರ-14 ಮತದಾರರಿದ್ದು, ಒಟ್ಟು 4,763 ಯುವ ವೋಟರ್ಸ್ ಒಳಗೊಂಡಿದೆ. ಗೋಕಾಕ್ ಕ್ಷೇತ್ರದ ನಗರ ಪ್ರದೇಶದಲ್ಲಿ 123, ಗ್ರಾಮೀಣ ಪ್ರದೇಶದಲ್ಲಿ 165 ಸೇರಿ ಒಟ್ಟು 288 ಮತಗಟ್ಟೆಗಳಿವೆ.

ಉಪಚುನಾವಣೆಗೆ ಸಿದ್ಧಗೊಂಡ ಅಖಾಡ..

ಡಿಸೆಂಬರ್ 5ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಾಗಿದ್ದು, ಡಿಸೆಂಬರ್ 5ರ‌ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕ್ಷೇತ್ರಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಿದ್ದು, 02 ಡಿಎಸ್‌ಪಿ, 05 ಸಿಪಿಐ, 08 ಪಿಎಸ್ಐ, 26 ಎಎಸ್ಐ, 340 ಪೊಲೀಸ್ ಕಾನ್ಸ್ ಟೇಬಲ್ ಮತ್ತು ಮುಖ್ಯಪೇದೆಗಳು, 321 ಹೋಂ ಗಾರ್ಡ್ ಸೇರಿ 5 ಡಿಎಆರ್, 5 ಕೆಎಸ್‌ಆರ್‌ಪಿ, 3 ಸಿಆರ್ ಪಿಎಫ್ ತುಕಡಿಗಳ ನಿಯೋಜನೆ ಮಾಡಲಾಗಿದೆ.

ABOUT THE AUTHOR

...view details