ಬೆಳಗಾವಿ :ಚಿನ್ನಾಭರಣ ಮಳಿಗೆ ಕಳ್ಳತನ ಪ್ರಕರಣ ಸಂಬಂಧ ಬಂಧಿತನಾಗಿ ಹಿಂಡಲಗಾ ಜೈಲು ಸೇರಿದ್ದ ವಿಚಾರಣಾಧೀನ ಖೈದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 830 ಖೈದಿಗಳಿರುವ ಜೈಲಿನಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ.
ಹಿಂಡಲಗಾ ಜೈಲಿನಲ್ಲಿ ದರೋಡೆಕೋರನಿಗೆ ಸೋಂಕು, ಕೋವಿಡ್ ಆಸ್ಪತ್ರೆಗೆ ಶಿಫ್ಟ್ - ಬೆಳಗಾವಿ ದರೋಡೆಕೋರನಿಗೆ ಸೋಂಕು ದೃಢ ಸುದ್ದಿ
ಹಿಂಡಲಗಾ ಜೈಲು ಸೇರಿದ್ದ ಕೈದಿಗೆ ಮೂರು ದಿನಗಳ ಬಳಿಕ ಕೊರೊನಾ ಸೋಂಕು ದೃಢಪಟ್ಟಿತ್ತು. ತಕ್ಷಣವೇ ಆರೋಪಿಯನ್ನು ಬೆಳಗಾವಿಯ ಕೋವಿಡ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ..
ನಗರದ ವಿಜಯನಗರದ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ್ದ ಕಳ್ಳ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದನು. ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದ ಕ್ಯಾಂಪ್ ಪೊಲೀಸರು ಕಂಟ್ರಿ ಪಿಸ್ತೂಲ್ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಬಳಿಕ ಆರೋಪಿಯನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿತ್ತು. ಹಿಂಡಲಗಾ ಜೈಲು ಸೇರಿದ್ದ ಖೈದಿಗೆ ಮೂರು ದಿನಗಳ ಬಳಿಕ ಕೊರೊನಾ ಸೋಂಕು ದೃಢಪಟ್ಟಿತ್ತು. ತಕ್ಷಣವೇ ಆರೋಪಿಯನ್ನು ಬೆಳಗಾವಿಯ ಕೋವಿಡ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ.
ಹೊಸದಾಗಿ ಬರುವ ಖೈದಿಗಳಿಗೆ 14 ದಿನ ಕ್ವಾರಂಟೈನ್ ಮಾಡಲು ಜೈಲಿನಲ್ಲಿ ಪ್ರತ್ಯೇಕ 10 ಸೆಲ್ ಸಿದ್ಧಗೊಳಿಸಲಾಗಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಜೈಲಿನ ಎಲ್ಲ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲಾಗಿದೆ. ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ.