ಚಿಕ್ಕೋಡಿ (ಬೆಳಗಾವಿ):ಕಳೆದ ವಾರ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರಿಗೆ ಕೊರೊನಾ ವೈರಸ್ ತಗುಲಿದ್ದರಿಂದ ಬೆಳಗಾವಿ ಬಿಮ್ಸ್ ಮತ್ತು ಹುಕ್ಕೇರಿ ನಗರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಕೊರೊನಾ ಗೆದ್ದು ಬಂದ ಪೌರಕಾರ್ಮಿಕರಿಗೆ ಪುಷ್ಪವೃಷ್ಟಿ ಮೂಲಕ ಸ್ವಾಗತ ಕೋರಿದ ಸ್ಥಳೀಯರು - corona to corona warrior
ಪೌರಕಾರ್ಮಿಕರು ಕೊರೊನಾ ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಬಂದಾಗ ಪುಷ್ಪವೃಷ್ಟಿ ಮಾಡುವ ಮೂಲಕ ಬರಮಾಡಿಕೊಂಡು ಅಭಿನಂದನೆ ಸಲ್ಲಿಸಲಾಯಿತು.
corona recovery
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಇಬ್ಬರು ಪೌರ ಕಾರ್ಮಿಕರು ಕೊರೊನಾ ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಇಂದು ಬಿಡುಗಡೆಯಾಗಿ ಮನೆಗೆ ಬಂದಾಗ ಪುಷ್ಪವೃಷ್ಟಿ ಮಾಡುವ ಮೂಲಕ ಬರಮಾಡಿಕೊಂಡು ಅಭಿನಂದನೆ ಸಲ್ಲಿಸಲಾಯಿತು.
ಕೊರೊನಾ ಒಂದು ಭಯಾನಕ ರೋಗ ಅಲ್ಲ. ಸೋಂಕಿತರು ಧೃತಿಗೆಡದೆ ಧೈರ್ಯವಾಗಿ ಇದ್ದು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದರೆ ಗುಣಮುಖರಾಗುತ್ತಾರೆ ಎನ್ನುತ್ತಾರೆ ಕೊರೊನಾ ಗೆದ್ದು ಬಂದ ಪೌರಕಾರ್ಮಿಕರು.