ಬೆಳಗಾವಿ: ಕೊರೊನಾ ಪರೀಕ್ಷೆ ನಡೆಸುವ ನಗರದ ನೆಹರು ನಗರದಲ್ಲಿನ ಐಸಿಎಂಆರ್ ಲ್ಯಾಬ್‌ನ ಮೂವರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಐಸಿಎಂಆರ್ ಲ್ಯಾಬ್‌ನ ಮೂವರು ಸಿಬ್ಬಂದಿಗೆ ಕೊರೊನಾ ದೃಢ - belgavi icmr lab
ಬೆಳಗಾವಿಯ ಐಸಿಎಂಆರ್ ಲ್ಯಾಬ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಮಹಿಳಾ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ. ಎರಡು ದಿನಗಳಿಂದ ಲ್ಯಾಬ್ ಮುಚ್ಚಲಾಗಿದೆ.
ಐಸಿಎಂಆರ್ನ ಮೂವರು ಮಹಿಳಾ ಸಿಬ್ಬಂದಿಗೆ ಕೊರೊನಾ ದೃಢ
ಮೂವರು ಮಹಿಳೆಯರಾಗಿದ್ದು, ಸೋಂಕಿನ ಗುಣಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸುಭಾಷ್ ನಗರದ ಕೋವಿಡ್ ಕೇರ್ ಸೆಂಟರ್‌ಗೆ ಅವರನ್ನು ದಾಖಲಿಸಲಾಗಿದೆ. ಇವರೆಲ್ಲ ಐಸಿಎಂಆರ್ ಲ್ಯಾಬ್‌ನ ಕ್ಯಾಂಟೀನ್‌ನಲ್ಲಿ ಊಟ, ಉಪಹಾರ ಸೇವಿಸಿದ್ದು, 180ಕ್ಕೂ ಅಧಿಕ ಜನರು ಅದೇ ಕ್ಯಾಂಟೀನ್ಗೆ ಭೇಟಿ ನೀಡಿದ್ದಾರೆ.
ಈವರೆಗೆ ಐಸಿಎಂಆರ್ ಲ್ಯಾಬ್‌ನ 13 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದರಿಂದ ಐಸಿಎಂಆರ್ ಲ್ಯಾಬ್ ಕಳೆದ ಎರಡು ದಿನಗಳಿಂದ ಮುಚ್ಚಲಾಗಿದೆ. ಈ ಐಸಿಎಂಆರ್ ಲ್ಯಾಬ್ನಲ್ಲಿ ದಿನಕ್ಕೆ 800 ರಿಂದ 1000 ವರೆಗೆ ಗಂಟಲು ದ್ರವದ ಪರೀಕ್ಷಾ ಸಾಮರ್ಥ್ಯ ಹೊಂದಿತ್ತು.