ಅಥಣಿ: ನ್ಯಾಯಾಧೀಶರೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಕಾರಣದಿಂದ ನ್ಯಾಯಾಲಯವನ್ನು ಸೀಲ್ಡೌನ್ ಮಾಡಿ ಸ್ಯಾನಿಟೈಜ್ ಮಾಡಲಾಗಿದೆ.
ನ್ಯಾಯಾಧೀಶರಿಗೆ ಕೊರೊನಾ; ಅಥಣಿ ನ್ಯಾಯಾಲಯ ಸೀಲ್ಡೌನ್ - ಅಥಣಿ ನ್ಯಾಯಾಲಯ
ಬೆಳಗಾವಿ ಜಿಲ್ಲೆಯ ಅಥಣಿಯ ನ್ಯಾಯಾಧೀಶರೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ನ್ಯಾಯಾಲಯವನ್ನು ಸೀಲ್ಡೌನ್ ಮಾಡಿ ಸ್ಯಾನಿಟೈಜ್ ಮಾಡಲಾಗಿದೆ.

ನ್ಯಾಯಾಲಯ ಸೀಲ್ಡೌನ್
ಮುಂದಿನ ಸೋಮವಾರದವರೆಗೆ ಸೀಲ್ಡೌನ್ ಮುಂದುವರಿಯುವ ಸಾಧ್ಯತೆ ಇದೆ. ತಾಲೂಕಿನಲ್ಲಿ 300 ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಮಹಾರಾಷ್ಟ್ರದಲ್ಲಿ ತಪಾಸಣೆಗೆ ಒಳಗಾಗಿ ಸೋಂಕು ಪತ್ತೆಯಾಗಿರುವ ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಅವರ ಲೆಕ್ಕ ರಾಜ್ಯ ಸರ್ಕಾರದ ಲೆಕ್ಕದಲ್ಲಿ ಸೇರಿಕೊಂಡಿಲ್ಲ. ಮಹಾರಾಷ್ಟ್ರದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೂ ಹೆಚ್ಚಿದೆ. ಅವರ ಅಂತ್ಯಕ್ರಿಯೆಯನ್ನು ಸಹ ಅಲ್ಲಿಯೇ ಮುಗಿಸಲಾಗಿದೆ. ಪ್ರತಿ ದಿನವೂ ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ.