ಚಿಕ್ಕೋಡಿ :ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡ ಶ್ರೀ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ನೂರಾರು ಜನರು ಸೇರಿ ಜಾತ್ರೆ ಮಾಡುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶ್ರೀ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆ.. ಪಕ್ಕದ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕಿತ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದ್ರೆ, ಮಹಾರಾಷ್ಟ್ರದ ಗಡಿಗೆ ಹೊಂದಿರುವ ಚಿಕ್ಕೋಡಿಯಲ್ಲಿ ಮಾತ್ರ ಅಧಿಕಾರಿಗಳು ನಿರ್ಲಕ್ಷ್ಯತೆ ತೋರಿಸುತ್ತಿದ್ದಾರೆ. ಜನರಿಗೆ ಕೊರೊನಾ, ಒಮಿಕ್ರಾನ್ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಮುಗಳಖೋಡ ಜಾತ್ರೆಯಲ್ಲಿ ಭಾಗಿಯಾದ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ನಿರ್ಲಕ್ಷ್ಯತೆ ತೋರಿದ್ದಾರೆ. ಜನರಿಗೆ ತಿಳುವಳಿಕೆ ಹೇಳಬೇಕಿದ್ದ ಪೊಲೀಸರು, ತಾಲೂಕಾಡಳಿತದ ಸಿಬ್ಬಂದಿಯೂ ಕಾಣಿಸುತ್ತಿಲ್ಲ.
ಇದರಿಂದ ಜನರು ತಮಗೆ ಮನಬಂದಂತೆ ವರ್ತನೆ ಮಾಡುತ್ತಿದ್ದಾರೆ. ಇತ್ತ ಕೊರೊನಾ ಸೋಂಕಿತ ಪ್ರಕರಣ ಹೆಚ್ಚುತ್ತಿದ್ದರೂ ಯಲ್ಲಮ್ಮ ದೇವಿ ಜಾತ್ರೆಯನ್ನು ರಾಯಬಾಗ ತಹಶೀಲ್ದಾರರು ಏಕೆ ನಿರ್ಬಂಧ ಮಾಡಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ.
ಓದಿ:ಸಂಕ್ರಾಂತಿ ಸಂಭ್ರಮ : ಶ್ರೀ ಗವಿ ಗಂಗಾಧರೇಶ್ವರ ಆಲಯದಲ್ಲಿಂದು ಸೂರ್ಯರಶ್ಮಿ ಸ್ಪರ್ಶ-ಭಕ್ತರಿಗಿಲ್ಲ ಪ್ರವೇಶ!