ಬೆಳಗಾವಿ: ಜ್ಯುವೆಲ್ಲರಿ ಶಾಪ್ ದರೋಡೆಗೆ ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ ಕಳ್ಳನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬೆಳಗಾವಿಯಲ್ಲಿ ಸಾರ್ವಜನಿಕರಿಂದ ಥಳಿಸಿಕೊಂಡಿದ್ದ ದರೋಡೆಕೋರನಿಗೆ ಕೊರೊನಾ ದೃಢ!
ದರೋಡೆಗೆ ಯತ್ನಿಸಿದ್ದವನನ್ನು ಥಳಿಸಿರುವುದೇನೋ ಸರಿ, ಆದರೆ ಆತನಿಗೀಗ ಕೊರೊನಾ ಧೃಡ ಪಟ್ಟಿರುವುದು ಸಾರ್ವಜನಿಕರಲ್ಲಿ ಭೀತಿಯನ್ನುಂಟುಮಾಡಿದೆ. ಬೆಳಗಾವಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಕೊರೊನಾ
ಹಿಂಡಲಗಾ ರಸ್ತೆಯ ಸಮೃದ್ಧಿ ಜ್ಯುವೆಲ್ಲರ್ಸ್‌ಗೆ ಜೂನ್ 27ರ ಸಂಜೆ 6.30ಕ್ಕೆ ನುಗ್ಗಿದ್ದ ದರೋಡೆಕೋರ ಗನ್ ತೋರಿಸಿ ಮಾಲೀಕನನ್ನು ಬೆದರಿಸಿದ್ದ. ಕೈಗೆ ಸಿಕ್ಕ ಚಿನ್ನಾಭರಣ ಎಗರಿಸಿ ಪರಾರಿಯಾಗುವಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ. ಆ ವೇಳೆ ಸ್ಥಳೀಯರು ದರೋಡೆಕೋರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು.
ದರೋಡೆಗೆ ಯತ್ನಿಸಿದ್ದವನನ್ನು ಥಳಿಸಿರುವುದೇನೋ ಸರಿ, ಆದರೆ ಆತನಿಗೀಗ ಕೊರೊನಾ ದೃಢಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.