ಬೆಳಗಾವಿ:ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆಗೆ ಆಗಮಿಸಿದ್ದ ಮತ್ತೊಬ್ಬ ಗರ್ಭಿಣಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ.
ಬೆಳಗಾವಿಯಲ್ಲಿ ಮತ್ತೊಬ್ಬ ಗರ್ಭಿಣಿಗೆ ಸೋಂಕು: ಜಿಲ್ಲೆಯಲ್ಲಿ127ಕ್ಕೇರಿದ ಕೊರೊನಾ ಸಂಖ್ಯೆ - ಬೆಳಗಾವಿ ಕೊರೊನಾ
ಮಹಾರಾಷ್ಟ್ರದಿಂದ ಬೆಳಗಾವಿಗೆ ಆಗಮಿಸಿದ್ದ ಗರ್ಭಿಣಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 127ಕ್ಕೆ ಏರಿದೆ.
![ಬೆಳಗಾವಿಯಲ್ಲಿ ಮತ್ತೊಬ್ಬ ಗರ್ಭಿಣಿಗೆ ಸೋಂಕು: ಜಿಲ್ಲೆಯಲ್ಲಿ127ಕ್ಕೇರಿದ ಕೊರೊನಾ ಸಂಖ್ಯೆ Corona positive](https://etvbharatimages.akamaized.net/etvbharat/prod-images/768-512-7315787-904-7315787-1590226738913.jpg)
ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಐವರು ಗರ್ಭಿಣಿಯರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಮೇ 11ರಂದು ಮುಂಬೈನಿಂದ ಶಿವಪೇಟೆಗೆ, 27 ವರ್ಷ ವಯಸ್ಸಿನ 4 ತಿಂಗಳ ಗರ್ಭಿಣಿ, ತನ್ನ ಪತಿ ಹಾಗೂ ನಾಲ್ವರು ಕುಟುಂಬ ಸದಸ್ಯರೊಂದಿಗೆ ಜಿಲ್ಲೆಗೆ ಆಗಮಿಸಿದ್ದರು. ಇಂದು ಈ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಲ್ಲಿ ದೃಢಪಟ್ಟಿದೆ.
ಈ ಕುಟುಂಬದವರ ಗ್ರಾಮ ಪ್ರವೇಶಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ರಾಮದುರ್ಗದ ಬಿಸಿಎಂ ಹಾಸ್ಟೆಲ್‌ನಲ್ಲಿ ಆರು ಜನರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಈ ವೇಳೆ ಆರು ಜನರ ಗಂಟಲು ದ್ರವ ಪ್ರಯೋಗಾಲಯಕ್ಕೆ ಕಳಿಹಿಸಿದ್ದು, ಗರ್ಭಿಣಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಉಳಿದವರ ವರದಿ ನೆಗಟಿವ್ ಬಂದಿದೆ.