ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಿಂದ ಮರಳಿದ್ದ ಗರ್ಭಿಣಿಗೆ ಸೋಂಕು: ಬೈಲಹೊಂಗಲದಲ್ಲಿ ಹೆಚ್ಚಾಯ್ತು ಆತಂಕ - ಬಸವೇಶ್ವರ ನಗರ ಸೀಲ್​ಡೌನ್​​

ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ಪುತ್ರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಇವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

corona positive for pregnant woman at Belgavi
ಬೈಲಹೊಂಗಲ

By

Published : Jun 26, 2020, 12:31 PM IST

ಬೆಳಗಾವಿ:ಹುಬ್ಬಳ್ಳಿಯಿಂದ ಜಿಲ್ಲೆಗೆ ಮರಳಿದ್ದ ಗರ್ಭಿಣಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಜನರೀಗ ಆತಂಕದಲ್ಲಿದ್ದಾರೆ.

ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ಪುತ್ರಿಗೆ ಕೊರೊನಾ ಸೋಂಕು ತಗುಲಿದೆ. ಇವರು ಹೆರಿಗೆಗೆಂದು ಬೈಲಹೊಂಗಲ ಪಟ್ಟಣದಲ್ಲಿರುವ ತವರು ಮನೆಗೆ ಬಂದಿದ್ದರು. ಇದೀಗ ಸೋಂಕು ದೃಢವಾಗಿದ್ದರಿಂದ ಪಟ್ಟಣದ ಬಸವೇಶ್ವರ ನಗರವನ್ನು ಸಂಪೂರ್ಣ ಸೀಲ್​ಡೌನ್​​ ಮಾಡಲಾಗಿದೆ.

ಬೈಲಹೊಂಗಲದಲ್ಲಿ ಹೆಚ್ಚಾಯ್ತು ಆತಂಕ

ಗರ್ಭಿಣಿಯನ್ನು ಮನೆಗೆ ಕರೆದು ಊಟ ಮಾಡಿಸಿದ್ದ ಅಕ್ಕಪಕ್ಕದ ಮನೆಯವರಿಗೂ, ಸ್ನೇಹಿತೆಯರಿಗೂ ಹಾಗೂ ಮನೆ ಕೆಲಸದಾಕೆ ಮತ್ತು ಕುಟುಂಬಸ್ಥರು ಇದೀಗ ಆಘಾತಕ್ಕೆ ಒಳಗಾಗಿದ್ದಾರೆ. ಸೋಂಕಿತ ಗರ್ಭಿಣಿಯ ಸಂಪರ್ಕಕ್ಕೆ ಬಂದಿದ್ದ 15 ದಿನದ ಹಸುಗೂಸು ಸೇರಿದಂತೆ 20 ಕ್ಕೂ ಅಧಿಕ ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ. ಅಲ್ಲದೇ ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ABOUT THE AUTHOR

...view details