ಕರ್ನಾಟಕ

karnataka

ETV Bharat / state

ಕಾಗವಾಡ ತಾಲೂಕಿನಲ್ಲಿಂದು 20 ಮಂದಿಗೆ ಕೊರೊನಾ, ಇಬ್ಬರು ಸಾವು - kagawada taluk corona case

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿಂದು 20 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

Corona Positive for 20 in Kagawada Taluk
ಕಾಗವಾಡ ತಾಲೂಕಿನಲ್ಲಿಂದು 20 ಮಂದಿಗೆ ಕೊರೊನಾ..ಇಬ್ಬರು ಸಾವು

By

Published : Jul 19, 2020, 10:55 PM IST

ಚಿಕ್ಕೋಡಿ(ಬೆಳಗಾವಿ):ಕಾಗವಾಡ ತಾಲೂಕಿನಲ್ಲಿಂದು 20 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ತಾಲೂಕಾ ಪಂಚಾಯತಿ ಎಇಓ ಸೇರಿ ಕಾಗವಾಡದಲ್ಲಿ 7, ಶಿರಗುಪ್ಪಿಯಲ್ಲಿ 7, ಉಗಾರ ಖುರ್ದದ 6 ಜನರಿಗೆ ಸೋಂಕು ತಗುಲಿದೆ. ಅಲ್ಲದೆ, ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಮಂಗಸೂಳಿ ಗ್ರಾಮದ ಓರ್ವ ಯುವತಿ ಮತ್ತು ಓರ್ವ ಪುರುಷ ಸಾವನ್ನಪ್ಪಿದ್ದಾರೆ. ಹೀಗಾಗಿ ಮಂಗಸೂಳಿ ಗ್ರಾಮದ ಪೂಜಾರಿ ಓಣಿಯನ್ನು ಸಂಪೂರ್ಣ ಸೀಲ್‍ಡೌನ್ ಮಾಡಿ, 30 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಸದ್ಯ, ಕೊರೊನಾ ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ABOUT THE AUTHOR

...view details