ಕರ್ನಾಟಕ

karnataka

ETV Bharat / state

ಚಿಕ್ಕೋಡಿ: 48 ಮಂದಿಯ ಅವಿಭಕ್ತ ಕುಟುಂಬದಲ್ಲಿ 19 ಮಂದಿಗೆ ಕೊರೊನಾ ಸೋಂಕು - chikkodi corona cases

ಕುಟುಂಬಸ್ಥರು ಮಹಾರಾಷ್ಟ್ರದ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದು ಕೊರೊನಾ ಸೋಂಕು ಹರಡಲು ಕಾರಣ ಎಂಬ ಮಾಹಿತಿ ದೊರೆತಿದೆ.

Corona Positive for 14 people of same family!
ಒಂದೇ ಕುಟುಂಬದ 14 ಜನರಿಗೆ ಕೊರೊನಾ ಪಾಸಿಟಿವ್: 48 ಜನರ ಪೈಕಿ ಒಟ್ಟು 19 ಮಂದಿಗೆ ಸೋಂಕು!

By

Published : Mar 14, 2021, 5:48 PM IST

ಚಿಕ್ಕೋಡಿ: ಇಲ್ಲಿನ ಅವಿಭಕ್ತ ಕುಟುಂಬದ 14 ಜನರಿಗೆ ಇಂದು ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಆ ಕುಟುಂಬದಲ್ಲಿರುವ 48 ಜನರ ಪೈಕಿ ಈಗಾಗಲೇ 19 ಮಂದಿಗೆ ಮಾರಕ ಸೋಂಕು ತಗುಲಿದೆ. ಈ ಪ್ರಕರಣ ಜಿಲ್ಲೆಯ ರಾಯಬಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ನಿನ್ನೆ 5 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಗ್ರಾಮದ 353 ಜನರಿಗೆ ಕೋವಿಡ್​ ಟೆಸ್ಟ್ ನಡೆಸಲಾಗಿತ್ತು. ಅವಿಭಕ್ತ ಕುಟುಂಬದ 48 ಜನರಲ್ಲಿ ಇದೀಗ ಒಟ್ಟು 19 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ.‌ ವ್ಯಕ್ತಿಯೋರ್ವರ ವಯೋಸಹಜ‌ ಕಾಯಿಲೆ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್​​ ಮಾಡಿಸಿದ ಬಳಿಕ ಪಾಸಿಟಿವ್​ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ:ಒಂದೇ ಕುಟುಂಬದ 48 ಜನರ ಕೊವೀಡ್ ತಪಾಸಣೆ: ಬೆಚ್ಚಿ ಬಿದ್ದ ಬಾವನಸೌಂದತ್ತಿ ಗ್ರಾಮ

ಮಹಾರಾಷ್ಟ್ರಕ್ಕೆ ಸಂಬಂಧಿಗಳ ಮನೆಗೆ ಹೋಗಿ ಬಂದಿದ್ದ ಕುಟುಂಬದ ಸದಸ್ಯರಿಂದ ಕೊರೊನಾ ಹರಡಿದೆ ಎನ್ನಲಾಗಿದೆ. ಕೊರೊನಾ ಪಾಸಿಟಿವ್ ಬಂದ ಕಾರಣ ಭಾವನಸೌಂದತ್ತಿ ಗ್ರಾಮದ ಸಂತೆ ರದ್ದುಗೊಳಿಸಲಾಗಿದೆ‌. ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ABOUT THE AUTHOR

...view details