ಕರ್ನಾಟಕ

karnataka

ಕುಂದಾನಗರಿಯಲ್ಲಿ ಇಂದು 358 ಜನರಿಗೆ ಕೊರೊನಾ: ಐವರು ಬಲಿ

By

Published : Aug 15, 2020, 11:46 PM IST

ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 358 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿವೆ.

belagavi
ಬೆಳಗಾವಿ

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 358 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಐವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡಲಾದ ಹೆಲ್ತ್ ಬುಲಿಟಿನ್ ಪ್ರಕಾರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 400 ರ ಗಡಿ‌ ಸಮೀಪಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,316ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿಯೇ 182 ಜನರಿಗೆ ಕೊರೊನಾ ಸೋಂಕು ವಕ್ಕರಿಸಿಕೊಂಡಿದೆ.

ಇನ್ನು ಗೋಕಾಕ್-52, ಅಥಣಿ-34, ಚಿಕ್ಕೋಡಿ-29, ಸವದತ್ತಿ-22, ಬೈಲಹೊಂಗಲ-13, ಹುಕ್ಕೇರಿ-11, ರಾಯಭಾಗ-07, ಖಾನಾಪುರ-06 ರಾಮದುರ್ಗ-02 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ‌ಈವರೆಗೆ 7,316 ಸೋಂಕಿತರ ಪೈಕಿ 3,467 ಸೋಂಕಿತರು ಕೊರೊನಾ ವೈರಸ್​ನಿಂದ ಗುಣಮುಖರಾಗಿದ್ದಾರೆ. 3,731 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 118 ಜನ ಸೋಂಕಿತರು ಕೋವಿಡ್​ಗೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ‌ ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ABOUT THE AUTHOR

...view details