ಕರ್ನಾಟಕ

karnataka

ETV Bharat / state

ಪಿಪಿಇ ಕಿಟ್​ ಧರಿಸದೇ ಕೊರೊನಾ ರೋಗಿಯ ಶವ ಸಂಸ್ಕಾರ.. ವೈದ್ಯಾಧಿಕಾರಿ ಸ್ಪಷ್ಟನೆ - Corona patient funeral without wearing PPE kit

ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದಾರೆ. ಆದರೆ, ಅವರ ಜೊತೆ ಇದ್ದ ಕೆಲವರು ಪಿಪಿಇ ಕಿಟ್​ ಧರಿಸಿಲ್ಲ. ಅಥಣಿಯಲ್ಲಿ ಮೊದಲ ಸಾವು ಆಗಿರುವುದರಿಂದ ನಾವು ಎಡವಿದ್ದೇವೆ..

dsdd
ವೈದ್ಯಾಧಿಕಾರಿ ಸ್ಪಷ್ಟನೆ

By

Published : Jul 4, 2020, 7:57 PM IST

ಅಥಣಿ : ಪಿಪಿಇ ಕಿಟ್​ ಧರಿಸದೇ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ ತಾಲೂಕು ವೈದ್ಯಾಧಿಕಾರಿ ಚನ್ನಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ವೈದ್ಯಾಧಿಕಾರಿ ಸ್ಪಷ್ಟನೆ

ಶ್ವಾಸಕೋಶದ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ತಾಲೂಕು ಆಸ್ಪತ್ರೆಯಲ್ಲಿ 2ರಂದು ಮರಣ ಹೊಂದಿದ್ದ. ಮೃತ ವ್ಯಕ್ತಿ ಸ್ವಾಬ್​ ವರದಿ ಬಂದಿಲ್ಲ. ಆದರೂ ಸಹ ಕೊರೊನಾ ವೈರಸ್​ನಿಂದ ಮೃತಪಟ್ಟವರನ್ನು ವೈದ್ಯಕೀಯ ನಿಯಮಾನುಸಾರ ಸಂಸ್ಕಾರ ಮಾಡುವ ಹಾಗೆ ಮಾಡಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದಾರೆ. ಆದರೆ, ಅವರ ಜೊತೆ ಇದ್ದ ಕೆಲವರು ಪಿಪಿಇ ಕಿಟ್​ ಧರಿಸಿಲ್ಲ. ಅಥಣಿಯಲ್ಲಿ ಮೊದಲ ಸಾವು ಆಗಿರುವುದರಿಂದ ನಾವು ಎಡವಿದ್ದೇವೆ. ಮುಂದೆ ಈ ರೀತಿ ಆಗದ ರೀತಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ABOUT THE AUTHOR

...view details