ಕರ್ನಾಟಕ

karnataka

ETV Bharat / state

ಕೊರೊನಾ ಟೆಸ್ಟ್ ಮಾಡ್ತಿದ್ದ ಟೆಕ್ನಿಷಿಯನ್‌ಗೂ ಸೋಂಕು.. IMCR ಟೆಸ್ಟಿಂಗ್ ಲ್ಯಾಬ್ ಬಂದ್​ - ಕೊರೊನಾ ಪರೀಕ್ಷಾ ಲ್ಯಾಬ್

ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆಗೆ ಕೇವಲ ಎರಡು ಟೆಸ್ಟಿಂಗ್ ಲ್ಯಾಬ್ ನೀಡಿದೆ. ಒಂದು ಐಸಿಎಂಆರ್ ಆವರಣದಲ್ಲಿ ಮತ್ತೊಂದು ಬೀಮ್ಸ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ..

Corona Infection to Technician: ICMR Testing Lab close
ಕೊರೊನಾ ಟೆಸ್ಟ್ ಮಾಡ್ತಿದ್ದ ಟೆಕ್ನಿಷಿಯನ್ ಗೂ ಸೋಂಕು: ಬೆಳಗಾವಿಯ ಐಸಿಎಂಆರ್ ಟೆಸ್ಟಿಂಗ್ ಲ್ಯಾಬ್ ಬಂದ್​

By

Published : Jul 10, 2020, 7:35 PM IST

ಬೆಳಗಾವಿ: ನಗರದಲ್ಲಿ ಸರ್ಕಾರ ಅಳವಡಿಸಿದ್ದ ಕೊರೊನಾ ಪರೀಕ್ಷಾ ಲ್ಯಾಬ್‌ನ ಸಿಬ್ಬಂದಿಗೂ ಮಹಾಮಾರಿ ಕೊರೊನಾ ವಕ್ಕರಿಸಿದೆ. ಹೀಗಾಗಿ ಇಲ್ಲಿನ ಐಸಿಎಂಆರ್ ಆವರಣದಲ್ಲಿದ್ದ ಕೊರೊನಾ ಟೆಸ್ಟಿಂಗ್ ಲ್ಯಾಬ್ ಕಾರ್ಯಾರಂಭವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಕೊರೊನಾ ಟೆಸ್ಟ್ ಮಾಡ್ತಿದ್ದ ಟೆಕ್ನಿಷಿಯನ್‌ಗೂ ಸೋಂಕು..​

ಕೊರೊನಾ ಟೆಸ್ಟಿಂಗ್ ಲ್ಯಾಬ್‌ನ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಲ್ಯಾಬ್ ಟೆಕ್ನಿಷಿಯನ್ ಆಗಿರುವ ಬೆಳಗಾವಿಯ ಹನುಮಾನ್​ ನಗರದ ನಿವಾಸಿಗೆ ಕೊರೊನಾ ಸೋಂಕು ತಗುಲಿದೆ. ಅಲ್ಲದೇ, ಇವರ ಸಂಪರ್ಕಕ್ಕೆ ಬಂದಿದ್ದ ತಂದೆ, ತಾಯಿ ಹಾಗೂ ಸಹೋದರಿಗೂ ಕೊರೊನಾ ದೃಢಪಟ್ಟಿದೆ. ಹೀಗಾಗಿ ನಾಲ್ವರನ್ನು ಕೋವಿಡ್ ವಾರ್ಡ್‌ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆಗೆ ಕೇವಲ ಎರಡು ಟೆಸ್ಟಿಂಗ್ ಲ್ಯಾಬ್ ನೀಡಿದೆ. ಒಂದು ಐಸಿಎಂಆರ್ ಆವರಣದಲ್ಲಿ ಮತ್ತೊಂದು ಬೀಮ್ಸ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಐಸಿಎಂಆರ್ ಆವರಣದ ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವ ಕಾರಣ ಲ್ಯಾಬ್ ಬಂದ್ ಮಾಡಲಾಗಿದೆ. ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಬೀಮ್ಸ್‌ನಲ್ಲಿರುವ ಲ್ಯಾಬ್‌ಗೆ ಹೆಚ್ಚಿನ ಹೊರೆಯಾಗ್ತಿದೆ. ಹೀಗಾಗಿ ಸೋಂಕು ಸಂಬಂಧ ವರದಿಗಳು ಬರುವುದು ತುಸು ವಿಳಂಬವಾಗುತ್ತಿದೆ.

ABOUT THE AUTHOR

...view details