ಬೆಳಗಾವಿ: ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದ್ದು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೇರಿಕೆ... ಬೆಳಗಾವಿ ಸಂಪೂರ್ಣ ಸೀಲ್ ಡೌನ್! - ರವಿವಾರ ಪೇಠ್ ಮಾರ್ಕೆಟ್
ಬೆಳಗಾವಿಯಲ್ಲಿ ಕೊರೊನಾ ಪಾಸಿಟಿವ್ ಕೇಸ್ 36 ಕ್ಕೆ ಏರಿಕೆಯಾಗಿರುವುದರಿಂದ ಜಿಲ್ಲೆಯನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಜನಜಂಗುಳಿಗೆ ಸಾಕ್ಷಿಯಾಗುತ್ತಿದ್ದ ರವಿವಾರ ಪೇಟೆ ಮಾರ್ಕೆಟ್ನ್ನು ಜಿಲ್ಲಾ ಪೊಲೀಸರು ಬಂದ್ ಮಾಡಿಸಿದ್ದಾರೆ.
ಬೆಳಗಾವಿ ಸಂಪೂರ್ಣ ಸೀಲ್ ಡೌನ್!
ಬೆಳ್ಳಂಬೆಳಗ್ಗೆ ಫೀಲ್ಡ್‌ಗೆ ಇಳಿದಿದ್ದ ಜಿಲ್ಲೆಯ ಪೊಲೀಸರು ಜನಜಂಗುಳಿಗೆ ಸಾಕ್ಷಿಯಾಗುತ್ತಿದ್ದ ರವಿವಾರ ಪೇಟೆ ಮಾರ್ಕೆಟ್ನ್ನ ಸಂಪೂರ್ಣ ಬಂದ್ ಮಾಡಿಸಿದ್ದಾರೆ.
ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 17 ಕೊರೊನಾ ಪ್ರಕರಣ ಪತ್ತೆ ಆಗಿದ್ದವು. ಈ ಹಿನ್ನೆಲೆ ಜನಸಂದಣಿ ತಡೆಯುವ ನಿಟ್ಟಿನಲ್ಲಿ ರವಿವಾರ ಪೇಟೆ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಅಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಯಾರೂ ಸಹ ಅನಗತ್ಯವಾಗಿ ರಸ್ತೆಗಿಳಿಯದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.