ಕರ್ನಾಟಕ

karnataka

ETV Bharat / state

ಪುತ್ರನಿಂದ ತಂದೆಗೆ ಕೊರೊನಾ ಸೋಂಕು; ಬೆಳಗಾವಿಯಲ್ಲಿ 8ಕ್ಕೇರಿದ ಸೋಂಕಿತರ ಸಂಖ್ಯೆ - ಬೆಳಗಾವಿ ಕೊರೊನಾ ಸುದ್ದಿ

ಬೆಳಗಾವಿ ತಾಲೂಕಿನ ಗ್ರಾಮವೊಂದರ 50 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ. 128 ಸೋಂಕಿತ ವ್ಯಕ್ತಿಯಿಂದ ಇತನ ತಂದೆ ಅಂದ್ರೆ 182ನೇ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ.

Belagavi
ಬೆಳಗಾವಿ

By

Published : Apr 9, 2020, 1:25 PM IST

ಬೆಳಗಾವಿ:ದೆಹಲಿಯಿಂದ ಮರಳಿ ಬಂದಿದ್ದ ಪುತ್ರನಿಂದ ತಂದೆಗೆ ಕೊರೊನಾ ಸೋಂಕು ತಗಲಿರುವುದು ದೃಢವಾಗಿದೆ.

ಬೆಳಗಾವಿ ತಾಲೂಕಿನ ಗ್ರಾಮವೊಂದರ 50 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ. 128 ಸೋಂಕಿತ ವ್ಯಕ್ತಿಯಿಂದ ಇತನ ತಂದೆ ಅಂದ್ರೆ 182ನೇ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. 128ನೇ ಸೋಂಕಿತ ವ್ಯಕ್ತಿ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಸಗಟು ವ್ಯಾಪಾರಿ ಆಗಿದ್ದನು.

ಬೆಳಗಾವಿ ತಾಲೂಕಿನ ಗ್ರಾಮವೊಂದರ ನಿವಾಸಿ ಹಾಗೂ 20 ವರ್ಷದ 128ನೇ ಸೋಂಕಿತ ಯುವಕ ಫೆ. 12ರಂದು ಬೆಳಗಾವಿಯಿಂದ ದೆಹಲಿಗೆ ರೈಲಿನಲ್ಲಿ ತೆರಳಿದ್ದನು. ದೆಹಲಿಯಿಂದ ಖಾಸಗಿ ವಾಹನದಲ್ಲಿ ತೆರಳಿ ಉತ್ತರಪ್ರದೇಶದ ಚೇಕಡಾ ಗ್ರಾಮಕ್ಕೆ ಪ್ರಯಾಣ ಬೆಳೆಸಿ 36 ದಿನಗಳ ಕಾಲ ಗ್ರಾಮದ ಬಿಲಾಲ್ ಮಸೀದಿಯಲ್ಲಿ ವಾಸವಿದ್ದ. ಮಾರ್ಚ್ 21ರಂದು ಉತ್ತರಪ್ರದೇಶದಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ವಾಪಸಾಗಿದ್ದ. ಮಾರ್ಚ್ 22ರಂದು ಬೆಳಗಾವಿಗೆ ಆಗಮಿಸಿದ್ದ ಈತ‌, ಟಾಟಾ ಏಸ್ ವಾಹನದಲ್ಲಿ ಸ್ವಗ್ರಾಮಕ್ಕೆ ಬಂದಿದ್ದನು. ಅಲ್ಲದೇ ಗ್ರಾಮದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ.

ಈತನ ಜತೆಗೆ ತಂದೆ-ತಾಯಿ ಸೇರಿ 9 ಜನರಿಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಅದರಲ್ಲಿ ತಂದೆಗೆ ಕೊರೊನಾ ಸೋಂಕು ದೃಢವಾಗಿದೆ. 182 ವ್ಯಕ್ತಿ ಜತೆಗೆ ಸಂಪರ್ಕ ಹೊಂದಿದ್ದವರ ಹುಡುಕಾಟದಲ್ಲಿ ಜಿಲ್ಲಾಡಳಿತ ತೊಡಗಿದೆ.

ABOUT THE AUTHOR

...view details