ಬೆಳಗಾವಿ:ಕಳೆದ ಮೂರು ದಿನಗಳ ಹಿಂದೆ ದರೋಡೆ ಪ್ರಕರಣದಲ್ಲಿ ಬಂಧಿತ ಆರೋಪಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ದಂಡು ನಗರದ ಕ್ಯಾಂಪ್ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
ಬೆಳಗಾವಿ: ದರೋಡೆ ಆರೋಪಿಗೆ ಸೋಂಕು ದೃಢ, ಪೊಲೀಸ್ ಠಾಣೆ ಸ್ಯಾನಿಟೈಸ್ - Camp police station in Belgaum city
ದರೋಡೆ ಪ್ರಕರಣದಲ್ಲಿ ಬಂಧಿತ ಆರೋಪಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ದಂಡು ನಗರದ ಕ್ಯಾಂಪ್ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.

ಆರೋಪಿಗೆ ಕೊರೊನಾ ಸೋಂಕು ದೃಢ: ಸಂಪೂರ್ಣ ಪೊಲೀಸ್ ಠಾಣೆಯ ಸ್ಯಾನಿಟೈಸೇಶನ್
ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದ ದರೋಡೆಕೋರನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಸೋಂಕಿನ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ದಂಡು ಮಂಡಳಿ ಸಿಇಓ ಬರ್ಚೇಸ್ವಾ ನೇತೃತ್ವದಲ್ಲಿ ಇಡೀ ಪೊಲೀಸ್ ಠಾಣೆಯನ್ನು ಸ್ಯಾನಿಟೈಸೇಶನ್ ಮಾಡಲಾಗಿದೆ. ಇನ್ನು ಕ್ಯಾಂಪ್ ಪೊಲೀಸ್ ಠಾಣೆ ಸಿಬ್ಬಂದಿಗಳಲ್ಲೂ ಆತಂಕ ಶುರುವಾಗಿದ್ದು, ಆರೋಪಿ ಜೊತೆ ಸಂಪರ್ಕ ಹೊಂದಿದ್ದ ಪೊಲೀಸರು, ಸಿಬ್ಬಂದಿ ತೀವ್ರ ಆತಂಕಿತರಾಗಿದ್ದಾರೆ ಎನ್ನಲಾಗಿದೆ.