ಬೆಳಗಾವಿ:ಕೋವಿಡ್-19 ಸೋಂಕು ತಗುಲಿದ್ದ 12 ಜನರು ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಬೆಳಗಾವಿಯಲ್ಲಿ 12 ಜನ ಕೊರೊನಾ ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೋವಿಡ್-19 ಸೋಂಕು ತಗುಲಿದ್ದ 12 ಜನರು ಸಂಪೂರ್ಣ ಗುಣಮುಖರಾಗಿದ್ದು, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
12 ಜನ ಕೊರೊನಾ ಸೋಂಕಿತರು ಗುಣಮುಖ
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಒಬ್ಬರು ಸೇರಿದಂತೆ ಚಿಕ್ಕೋಡಿ, ಸಂಕೇಶ್ವರ, ರಾಯಭಾಗ ಮತ್ತು ಅಥಣಿ ತಾಲೂಕಿನ (ಪಿ-574, ಪಿ-723, ಪಿ- 820, ಪಿ-821, ಪಿ-824, ಪಿ-834, ಪಿ-830,ಪಿ-832, ಪಿ-833, ಪಿ-836, ಪಿ-842, ಪಿ-844) 12 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.