ಬೆಳಗಾವಿ: ಕೊರೊನಾ ನಿಯಂತ್ರಣಕ್ಕಾಗಿ ಪಣ ತೊಟ್ಟು ಹಗಲು ರಾತ್ರಿ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ವೈದ್ಯರಿಗೂ ಕೂಡ ಕೋವಿಡ್ ಭೀತಿ ಎದುರಾಗಿದ್ದು, ಇದೀಗ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಸರ್ಜನ್‌ಗೂ ಸೋಂಕು ತಗುಲಿದೆ.
ಬೆಳಗಾವಿ ಜಿಲ್ಲಾಸ್ಪತ್ರೆ ಸರ್ಜನ್‌ಗೂ ತಗುಲಿದ ಕೊರೊನಾ - Belagavi covid cases
ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಜಿಲ್ಲಾ ಆಸ್ಪತ್ರೆಯ ಸರ್ಜನ್‌ಗೂ ಕೂಡ ಸೋಂಕು ತಗುಲಿರುವುದು ದೃಢಪಟ್ಟಿದೆ.
Hospital
ಈವರೆಗೆ ಬಿಮ್ಸ್ ಆಸ್ಪತ್ರೆಯ 8 ವೈದ್ಯರು, ಇಬ್ಬರು ನರ್ಸ್, ಓರ್ವ ಡಾಟಾ ಎಂಟ್ರಿ ಆಪರೇಟರ್ ಹಾಗೂ ನಾಲ್ವರು ಟೆಕ್ನಿಷಿಯನ್‌ಗಳಿಗೆ ಸೋಂಕು ತಗುಲಿದೆ. ಜೊತೆಗೆ ಬೆಳಗಾವಿಯ ಡಿಹೆಚ್‌ಒ, ಟಿಹೆಚ್‌ಒ ಕಚೇರಿಯ ತಲಾ ಓರ್ವ ಸಿಬ್ಬಂದಿಗೆ ಸೋಂಕು ಅಂಟಿದೆ.
ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ಗೂ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಆತಂಕ ಹೆಚ್ಚಾಗಿದೆ.