ಚಿಕ್ಕೋಡಿ:ಕುಡಚಿ ಪಟ್ಟಣ ಒಂದರಲ್ಲೇ 17 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಪಟ್ಟಣವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಜೊತೆಗೆ ನಗರದಲ್ಲಿ ಹೆಚ್ಚಿನ ಸಂಖೆಯಲ್ಲಿ ಪೊಲೀಸರು ಹಾಗೂ ಆರೋಗ್ಯ ಸಿಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಕುಡಚಿ ಪಟ್ಟಣ ಸಂಪೂರ್ಣ ಸೀಲ್‌ಡೌನ್: ಹೆಚ್ಚಿನ ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜನೆ - latest kuduchi news
ಕುಡಚಿ ಪಟ್ಟಣದಲ್ಲಿ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆ ಪಟ್ಟಣದಲ್ಲಿ ಮನೆಯಿಂದ ಯಾರೂ ಹೊರಗಡೆ ಬಾರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕುಡಚಿ ಪಟ್ಟಣ ಸಂಪೂರ್ಣ ಸೀಲ್‌ಡೌನ್
ಪಟ್ಟಣದಲ್ಲಿ ಅಗತ್ಯ ವಸ್ತುಗಳ ಅಂಗಡಿಗಳಿಗೆ ಸಹ ಬೀಗ ಹಾಕಲಾಗಿದ್ದು, ಜಿಲ್ಲಾಡಳಿತ ಮನೆ ಮನೆಗೆ ತೆರಳಿ ಅಗತ್ಯ ವಸ್ತುಗಳ ವಿತರಣೆ ಮಾಡುತ್ತಿದೆ.
ಕುಡಚಿ ಪಟ್ಟಣದಲ್ಲಿ ಮನೆಯಿಂದ ಯಾರೂ ಹೊರಗಡೆ ಬಾರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ ಬ್ಯಾರಿಕೇಡ್ ಹಾಕಿ ಸೀಲ್‌ಡೌನ್ ಮಾಡಲಾಗಿದೆ. ಇಡೀ ಪಟ್ಟಣವನ್ನು ಸ್ಯಾನಿಟೈಸ್ ಮಾಡಲು ಪುರಸಭೆ ಮುಂದಾಗಿದೆ. ಮುಂದಿನ ಒಂದು ವಾರದವರೆಗೆ ಇದೇ ರೀತಿಯಲ್ಲಿ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತ ತೀರ್ಮಾನ ಕೈಗೊಂಡಿದೆ.