ಅಥಣಿ (ಬೆಳಗಾವಿ): ದೇಶದಾದ್ಯಂತ ಕೊರೊನಾ ವೈರಸ್ ವಿರುದ್ಧ ಹೋರಾಡುವ ಉದ್ದೇಶದಿಂದ ಲಾಕ್ಡೌನ್ ಆದೇಶ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಇಲ್ಲಿನ ಗಚ್ಚಿನಮಠದಲ್ಲಿ ಏಪ್ರಿಲ್ 9ರಂದು ನಡೆಯಬೇಕಾಗಿದ್ದ ವರ್ಷದ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ಎಫೆಕ್ಟ್: ಗಚ್ಚಿನಮಠ ಜಾತ್ರಾ ಮಹೋತ್ಸವ ರದ್ದು - gacchina matt
ಕೊರೊನಾ ವೈರಸ್ನಿಂದಾಗಿ ದೇಶದ ಎಲ್ಲಾ ಮಂದಿರಗಳು ಬಾಗಿಲು ಹಾಕಿವೆ. ಅಲ್ಲದೆ ಪ್ರತಿ ವರ್ಷದಂತೆ ಜರುಗುತ್ತಿದ್ದ ಉತ್ಸವ ಹಾಗೂ ಜಾತ್ರೆಗಳನ್ನು ರದ್ದು ಮಾಡಲಾಗಿದೆ. ಇದೀಗ ಅಥಣಿ ತಾಲೂಕಿನ ಗಚ್ಚಿನಮಠದಲ್ಲಿ ಏಪ್ರಿಲ್ 9ರಂದು ನಡೆಯಬೇಕಾಗಿದ್ದ ವರ್ಷದ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ.

ಈ ಸಾಂಕ್ರಾಮಿಕ ರೋಗದಿಂದ ಸಾಕಷ್ಟು ಜನ ತೊಂದರೆಗೆ ಒಳಗಾಗುತ್ತಿದ್ದಾರೆ. ಇಂದಿನ ಅಗತ್ಯವೆಂದರೆ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರಾಥಮಿಕ ಹಂತವಾಗಿದೆ. ಯಾವುದೇ ಹಂತದಲ್ಲೂ ಜನರು ಗುಂಪು ಸೇರುವುದನ್ನು ತಡೆಯಬೇಕು. ಸರ್ಕಾರ ಅಥವಾ ಪೊಲೀಸರ ಮೂಲಕ ಕ್ರಮಗಳನ್ನು ಜರುಗಿಸುವುದಕ್ಕಿಂತ ಜನರೇ ತಮ್ಮ ಸಂರಕ್ಷಣೆ ಮಾಡಿಕೊಳ್ಳುವಂತಾಗಬೇಕು.
ಅತ್ಯಂತ ಅನಿವಾರ್ಯವಾಗಿರುವ ಸಂದರ್ಭದಲ್ಲಿ ರಸ್ತೆಗೆ ಬಂದಾಗ ಮಾಸ್ಕ್ ಬಳಸುವುದು ಕಡ್ಡಾಯವಾಗಬೇಕು. ಯಾವುದೇ ವ್ಯಕ್ತಿ ಮಾಸ್ಕ್ ಧರಿಸುವುದರಿಂದ ಬೇರೆಯವರಿಗೆ ವೈರಾಣು ಹರಡದಂತೆ ಬೇರೆಯವರಿಂದ ತನಗೆ ಹರಡದಂತೆ ಮುಂಜಾಗ್ರತೆ ವಹಿಸಬೇಕಾಗುತ್ತದೆ ಎಂದಿದ್ದಾರೆ.