ಬೆಳಗಾವಿ:ಮಹಾಮಾರಿ ಕೊರೊನಾ ಎಫೆಕ್ಟ್ನಿಂದ ಸಾರಿಗೆ ಇಲಾಖೆ ನಲುಗಿ ಹೋಗಿದ್ದು, ನಿತ್ಯ ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್ಗಳು ಖಾಲಿ ಹೊಡೆಯುತ್ತಿವೆ.
ಕೊರೊನಾ ದಿಗ್ಬಂಧನ: ಮಹಾರಾಷ್ಟ್ರಕ್ಕೆ ತೆರಳುವ ಬಸ್ಗಳು ಭಣ ಭಣ - ಬೆಳಗಾವಿಯಲ್ಲಿ ಕೊರೊನಾ ಎಫೆಕ್ಟ್
ಕೊರೊನಾ ವೈರಸ್ ಎಫೆಕ್ಟ್ನಿಂದ ದೇಶದ ವಿವಿಧ ವಯಲಗಳು ನಷ್ಟ ಅನುಭವಿಸುತ್ತಿದ್ದು, ಸಾರಿಗೆ ಇಲಾಖೆ ಇರದ ಹೊರತಾಗಿಲ್ಲ. ಬೆಳಗಾವಿಯಿಂದ ಪ್ರತಿನಿತ್ಯ ನೂರಾರು ಬಸ್ಗಳ ಸಂಚಾರ ನಡೆಸುತ್ತಿದ್ದವು. ಆದರೆ ಕೊರೊನಾದಿಂದ ನಿತ್ಯ ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್ಗಳು ಖಾಲಿ ಹೊಡೆಯುತ್ತಿವೆ.
Buses left for Maharashtra are empty
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಹೀಗಾಗಿ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಬೆಳಗಾವಿಯಿಂದ ನಿತ್ಯ ಕೊಲ್ಲಾಪುರ, ಸಾತಾರಾ, ಮೀರಜ್, ಪುಣೆ, ಚಂದಗಡ, ಕರಾಡ್, ಸಿಂದದುರ್ಗ, ವಿಶಾಲಘಡ, ಮುಂಬೈ ಸೇರಿದಂತೆ 250 ಕ್ಕೂ ಅಧಿಕ ಸ್ಥಳಕ್ಕೆ ಇಲ್ಲಿನ ಬಸ್ಗಳು ಓಡಾಡುತ್ತವೆ.
ಆದರೆ ಪ್ರಯಾಣಿಕರ ಸಂಖ್ಯೆ ಇಳಿಮುಖ ಆಗುತ್ತಿದ್ದಂತೆ ಇಲಾಖೆಗೆ ಆದಾಯವೂ ಕಡಿಮೆಯಾಗಿದ್ದು, ಸಾರಿಗೆ ಇಲಾಖೆಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸುತ್ತಿದೆ.