ಕರ್ನಾಟಕ

karnataka

ETV Bharat / state

ಎಂಥಾ ಜನ ಇವ್ರು, ರಸ್ತೆಗೆ ಮಣ್ಣು ಹಾಕಿ ಸಂಪರ್ಕ ಕಡಿತಗೊಳಿಸಿದ್ರೆ ಆ್ಯಂಬುಲೆನ್ಸ್ ತೆರಳೋದ್ಹೇಗೆ? - coroan effect on belgavi

ಕೆಲ ಗ್ರಾಮಗಳಲ್ಲಿ ಕೊರೊನಾ ತಡೆ ಹೆಸರಿನಲ್ಲಿ ನೈತಿಕ ಪೊಲೀಸಗಿರಿ ಮಾಡಲಾಗುತ್ತಿದೆ. ಚಿಕಿತ್ಸೆಗಾಗಿ ಬೇರೆ ತಾಲೂಕಿನ ಆಸ್ಪತ್ರೆಗೆ ತೆರಳಬೇಕಿರುವ ರೋಗಿಗಳು ರಸ್ತೆ ದಾಟಲಾಗದೆ ಸಂಕಟಪಡುವ ಸ್ಥಿತಿ ನಿರ್ಮಾಣವಾಗಿದೆ.

corona effct,
ಕೊರೊನಾ ಎಫೆಕ್ಟ್​,

By

Published : Apr 29, 2020, 7:29 PM IST

ಬೆಳಗಾವಿ :ಖಾನಾಪೂರ, ಇಟಗಿ, ಬೋಗೂರ ಹಾಗಾ ಧಾರವಾಡಕ್ಕೆ ಸಂಪರ್ಕ ಒದಗಿಸುವ ಕಿತ್ತೂರ ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿಯ ಮುಖ್ಯ ರಸ್ತೆಗೆ ಮಣ್ಣು ಹಾಕಿರುವುದರಿಂದ ಅನಾರೋಗ್ಯ ಸಮಸ್ಯೆ ಹೊಂದಿರುವ ಜನ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಪರದಾಡುವಂತಾಗಿದೆ.

ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಬೋಗೂರು ಗ್ರಾಮದಲ್ಲಿ ಓರ್ವ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ಕರೆದುಕೊಂಡು ಹೋಗಲು ಬಂದ ಆ್ಯಂಬುಲೆನ್ಸ್‌ವೊಂದು ರಸ್ತೆ ದಾಟಲು ಸಾಧ್ಯವಾಗದೇ ವಾಪಸ್ ತೆರಳಿದೆ ಎನ್ನಲಾಗಿದೆ. ಇದಲ್ಲದೇ ಖಾನಾಪೂರ, ಇಟಗಿ, ಬೋಗೂರ ಹಾಗೂ ಧಾರವಾಡಕ್ಕೆ ತೆರಳಬೇಕಾದ ಜನ ಅಗತ್ಯ ದಿನಸಿ ವಸ್ತುಗಳು, ಗ್ಯಾಸ್, ಹಾಲು ಹಾಗೂ ಇನ್ನಿತರ ವಸ್ತುಗಳನ್ನ ಖರೀದಿಸಲು ತೊಂದರೆ ಆಗುತ್ತಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಇದನ್ನು ತೆರವುಗೊಳಿಸುವಂತೆ ಜನ ಒತ್ತಾಯಿಸಿದ್ದಾರೆ.

ಕೊರೊನಾ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಆದರೆ, ಕೆಲ ಗ್ರಾಮಗಳಲ್ಲಿ ಕೊರೊನಾ ತಡೆ ಹೆಸರಿನಲ್ಲಿ ನೈತಿಕ ಪೊಲೀಸಗಿರಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಚಿಕಿತ್ಸೆಗಾಗಿ ಬೇರೆ ತಾಲೂಕಿನ ಆಸ್ಪತ್ರೆಗೆ ತೆರಳಬೇಕಿರುವ ರೋಗಿಗಳು ರಸ್ತೆ ದಾಟಲಾಗದೆ ಸಂಕಟಪಡುವ ಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

...view details