ಅಥಣಿ: ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಕೊರೊನಾ ಸೋಂಕು ನಿವಾರಕ ಮಾರ್ಗವನ್ನು ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟಿಸಿದರು.
ಅಥಣಿಯಲ್ಲಿ ಸೋಂಕು ನಿವಾರಕ ಮಾರ್ಗ ಉದ್ಘಾಟಿಸಿದ ಡಿಸಿಎಂ ಸವದಿ - ಲಾಕ್ಡೌನ್
ಬೆಳಗಾವಿಯ ಅಥಣಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಕೊರೊನಾ ಸೋಂಕು ನಿವಾರಣೆ ಮಾರ್ಗವನ್ನು ನಿರ್ಮಿಸಲಾಗಿದೆ. ಇಂದು ಡಿಸಿಎಂ ಲಕ್ಷ್ಮಣ ಸವದಿಯವರು ಇದನ್ನು ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಟ್ಟಿದ್ದಾರೆ.
ಅಥಣಿಯಲ್ಲಿ ಕೊರೊನಾ ಸೋಂಕು ನಿವಾರಣೆ ಮಾರ್ಗ
ಮೂರನೇ ಹಂತದ ಲಾಕ್ಡೌನ್ ಕೊನೆಯಾದರೆ ಸರ್ಕಾರದಿಂದ ಬಸ್ ಸಂಚಾರ ಪ್ರಾರಂಭಿಸಲು ಅನುಮತಿ ಸಿಗಬಹುದು. ಈ ಹಿನ್ನೆಲೆಯಲ್ಲಿ ಘಟಕದಲ್ಲಿ ಸಿದ್ಧತೆ ನಡೆದಿದ್ದು, ಈ ಸೋಂಕು ನಿವಾರಕ ಮಾರ್ಗ ಕೊರೊನಾ ಹರಡುವಿಕೆ ತಡೆಗಟ್ಟಲು ಸಹಕಾರಿಯಾಗಲಿದೆ.
ಸಾರಿಗೆ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿಯವರು ಈ ಸೋಂಕು ನಿವಾರಕ ಮಾರ್ಗವನ್ನು ಸ್ಥಾಪಿಸಿದ್ದಾರೆ.