ಅಥಣಿ:ಕಳೆದ ಜುಲೈ ತಿಂಗಳಲ್ಲಿ ಶತಮಾನದಲ್ಲಿ ಕಂಡು ಕೇಳರಿಯದ ರೀತಿ ಕೃಷ್ಣಾನದಿ ಪ್ರವಾಹದಿಂದ ಸಂಪೂರ್ಣ ತತ್ತರಿಸಿದ್ದ ಅಥಣಿ ತಾಲೂಕಿನ ಜನತೆಗೆ ಕೊರೊನಾ ವೈರಸ್ ಎರಡನೇ ಗಂಡಾಂತರವಾಗಿ ಪರಿಣಮಿಸಿದೆ.
ಪ್ರವಾಹದ ನಂತರ ದೊಡ್ಡ ಗಂಡಾಂತರ ತಂದಿದ್ದೇ ಈ ಕೊರೊನಾ - coronavirus update
ಕೃಷ್ಣಾನದಿ ಪ್ರವಾಹದಿಂದ ಸಂಪೂರ್ಣ ತತ್ತರಿಸಿದ್ದ ಅಥಣಿ ತಾಲೂಕಿನ ಜನತೆಗೆ ಕೊರೊನಾ ವೈರಸ್ ಎರಡನೇ ಗಂಡಾಂತರವಾಗಿ ಪರಿಣಮಿಸಿದೆ.
ಅಥಣಿ
ಕೋವಿಡ್-19 ಪ್ರಕರಣದಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಮಹಾರಾಷ್ಟ್ರಕ್ಕೆ ರಾಜ್ಯದ ಬೆಳಗಾವಿಯ ಅಥಣಿ ತಾಲೂಕು ಹೊಂದಿಕೊಂಡಿದೆ. ಆದರೆ, ಈವರೆಗೂ ಮಹಾರಾಷ್ಟ್ರದ ನಂಟು ಅಥಣಿಗೆ ಅಂಟಿಲ್ಲ. ಗಡಿ ಭಾಗದಲ್ಲೇ ಇರುವ ಕಾರಣ ಜನರಲ್ಲಿ ಆತಂಕ ಮನೆ ಮಾಡಿದೆ. ಜಾರ್ಖಂಡ್ನಿಂದ ಬಂದವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರಬೇಕಿದೆ.