ಬೆಳಗಾವಿ :ವಿಧಾನ ಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಅವರ ಪುತ್ರಿಯ ಮದುವೆ ಸಮಾರಂಭಕ್ಕೂ ಕೊರೊನಾ ಆತಂಕ ತಂದೊಡ್ಡಿದೆ.
ಎಂಎಲ್ಸಿ ಪುತ್ರಿಯ ಅದ್ದೂರಿ ಮದುವೆಗೂ ಕೊರೊನಾ ಕರಿ ನೆರಳು! - ವಿಧಾನ ಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್
ಈಗಾಗಲೇ ಮಹಾಂತೇಶ್ ಕವಟಗಿಮಠ ಬಂಧು-ಬಳಗಕ್ಕೆಲ್ಲ ಮದುವೆ ಆಹ್ವಾನ ಪತ್ರಿಕೆ ತಲುಪಿಸಿದ್ದಾರೆ. ಮದುವೆಗೆ ಕೇವಲ ಎರಡೇ ದಿನ ಬಾಕಿ ಇದೆ. ಹಾಗಾಗಿ ಮದುವೆ ಹೇಗೆ ಮಾಡಬೇಕೆಂಬ ಗೊಂದಲದಲ್ಲಿ ಕವಟಗಿಮಠ ಕುಟುಂಬ ಸಿಲುಕಿದೆ.
![ಎಂಎಲ್ಸಿ ಪುತ್ರಿಯ ಅದ್ದೂರಿ ಮದುವೆಗೂ ಕೊರೊನಾ ಕರಿ ನೆರಳು! ಕೊರೊನಾ ಕಪ್ಪು ಛಾಯೆ](https://etvbharatimages.akamaized.net/etvbharat/prod-images/768-512-6397166-thumbnail-3x2-hugu.jpg)
ಮಾರ್ಚ್ 15ರಂದು ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಅದ್ಧೂರಿ ಮದುವೆ ಸಮಾರಂಭ ನಿಗದಿ ಮಾಡಲಾಗಿತ್ತು. ರಾಜ್ಯಪಾಲ ವಜುಬಾಯ್ ವಾಲಾ, ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿ ಹಲವು ಗಣ್ಯರಿಗೆ ಮಹಾಂತೇಶ ಕವಟಗಿಮಠ ಅವರು ಆಹ್ವಾನ ನೀಡಿದ್ದರು. ಒಂದು ವಾರಗಳ ಕಾಲ ಸಭೆ, ಸಮಾರಂಭ, ಅದ್ದೂರಿ ಮದುವೆ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ. ನಾಡಿದ್ದು ನಡೆಯಲಿರುವ ಮದುವೆಗೆ ಗಣ್ಯಾತಿ ಗಣ್ಯರು ಗೈರಾಗುವ ಸಾಧ್ಯತೆ ಇದೆ.
ಸಿಎಂ ಅವರ ಬೆಳಗಾವಿ ಪ್ರವಾಸವೂ ಕೂಡ ರದ್ದಾಗಿದೆ. ಈಗಾಗಲೇ ಮಹಾಂತೇಶ್ ಕವಟಗಿಮಠ ಬಂಧು ಬಳಗಕ್ಕೆ ಮದುವೆ ಆಹ್ವಾನ ಪತ್ರಿಕೆ ತಲುಪಿಸಿದ್ದಾರೆ. ಮದುವೆಗೆ ಕೇವಲ ಎರಡೇ ದಿನ ಬಾಕಿ ಇದೆ. ಹಾಗಾಗಿ ಮದುವೆ ಹೇಗೆ ಮಾಡಬೇಕೆಂಬ ಗೊಂದಲದಲ್ಲಿ ಕವಟಗಿಮಠ ಕುಟುಂಬ ಸಿಲುಕಿದೆ.