ಅಥಣಿ: ಮುಸ್ಲಿಂ ಸಮಾಜದ ಕುರಿತು ಅವಹೇಳನಕಾರಿ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಧರ್ಮ ಗುರುಗಳಿಂದ ಸಮಾಜ ಬಾಂಧವರಿಗೆ ಮನವಿ ಹಾಗೂ ಕೊರೊನಾ ವೈರಸ್ ಜಾಗೃತಿ ಮೂಡಿಸಲಾಯಿತು.
ಅಥಣಿ ಪಟ್ಟಣದಲ್ಲಿ ಮುಸ್ಲಿಂ ಧರ್ಮಗುರುಗಳಿಂದ ಕೊರೊನಾ ಜಾಗೃತಿ..
ಜನರು ಅನವಶ್ಯಕವಾಗಿ ಮನೆಯಿಂದ ಹೊರಬರದಂತೆ ಪಟ್ಟಣದ ಜಮಿಯತ್ ಉಲಮಾ ಹಿಂದ್ ಅಧ್ಯಕ್ಷ ಮುಕ್ತಿ ಹಬೀಬುಲ್ಲ ಖಾಸ್ಮಿ ಜನರಲ್ಲಿ ಮನವಿ ಮಾಡಿದರಲ್ಲದೆ ಸ್ಯಾನಿಟೈಸರ್ ಮತ್ತು ಮಾಸ್ಕ ವಿತರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಮುಸ್ಲಿಂ ಸಮಾಜ ಬಾಂಧವರು ಸರ್ಕಾರದ ಕೆಲಸಕ್ಕೆ ಸ್ಪಂದಿಸುವಂತೆ ಮತ್ತು ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜೊತೆ ಸಹಕರಿಸುವಂತೆ ಮನವಿ ಮಾಡಿದ ಮೌಲಾನಾಗಳು, ಅಥಣಿ ಪಟ್ಟಣದ ನಾಲಬಂದ್ ಗಲ್ಲಿಯಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರು.
ಜನರು ಅನವಶ್ಯಕವಾಗಿ ಮನೆಯಿಂದ ಹೊರಬರದಂತೆ ಪಟ್ಟಣದ ಜಮಿಯತ್ ಉಲಮಾ ಹಿಂದ್ ಅಧ್ಯಕ್ಷ ಮುಕ್ತಿ ಹಬೀಬುಲ್ಲ ಖಾಸ್ಮಿ ಜನರಲ್ಲಿ ಮನವಿ ಮಾಡಿದರಲ್ಲದೆ ಸ್ಯಾನಿಟೈಸರ್ ಮತ್ತು ಮಾಸ್ಕ ವಿತರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ಧರ್ಮ ಗುರುಗಳಾದ ಮೌಲಾನಾ ಜುಬೇರ, ಮೌಲಾನಾ ಸುಹೇಲ್ ಮತ್ತು ಸಮಾಜ ಮುಖಂಡರಾದ ಅಸ್ಲಂ ನಾಲಬಂದ್,ಅಯಾಜ್ ಮಾಸ್ಟರ್,ಗುಲಾಬ್ ನಾಲಬಂದ್, ಶಬ್ಬಿರ ಸಾತ್ ಬಚ್ಚೆ ಮತ್ತು ಇತರರು ಉಪಸ್ಥಿತರಿದ್ದರು.