ಚಿಕ್ಕೋಡಿ: ಕೊತ್ತಂಬರಿ ಬೆಳೆಗೆ ಮಾರುಕಟ್ಟೆ ಸಿಗದೇ ಬೆಳೆಯನ್ನು ಸಂಪೂರ್ಣ ನಾಶಗೊಳಿಸಿದ ಘಟನೆ ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದಲ್ಲಿ ನಡೆದಿದೆ.
ಕೊತ್ತಂಬರಿ ಬೆಲೆ ಕುಸಿತ: ಬೆಳೆ ನಾಶ ಮಾಡಿದ ರೈತ! - lock down for corona virus
ಕಟಾವಿಗೆ ಬಂದಿದ್ದ ಕೊತ್ತಂಬರಿ ಬೆಲೆ ಕುಸಿದಿದ್ದು, ಇನ್ನೊಂದು ಕಡೆ ಮಾರುಕಟ್ಟೆ ಇಲ್ಲದಿರುವುದರಿಂದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ರೈತ ಮಲ್ಲಪ್ಪ ಬೆಳೆಯನ್ನು ನಾಶಗೊಳಿಸಿದ್ದಾರೆ.
ಕೊತ್ತಂಬರಿ ಬೆಲೆ ಕುಸಿತ
ತಾಲೂಕಿನ ಸಾರಾಪುರ ಗ್ರಾಮದ ನಿವಾಸಿ ಮಲ್ಲಪ್ಪ ಕೊತ್ತಂಬರಿ ಬೆಳೆ ನಾಶ ಮಾಡಿದ್ದು, ಬೆಳೆದು ನಿಂತ ಕೊತ್ತಂಬರಿಗೆ ಸರಿಯಾದ ಬೆಲೆ ಇಲ್ಲ. ಮಾರುಕಟ್ಟೆ ಕೂಡಾ ವ್ಯವಸ್ಥಿತವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.