ಚಿಕ್ಕೋಡಿ : ಸರ್ಕಾರದ ಆದೇಶ ಮೇರೆಗೆ ಬೆಳಗಾವಿಯಲ್ಲಿ 144 ಜಾರಿಯಲ್ಲಿದ್ದರೂ ಕೂಡ ಸಾರ್ವಜನಿಕರು ಹುಕ್ಕೇರಿಯಲ್ಲಿ ಸಂತೆ ಮಾಡಲು ಮುಂದಾಗಿದ್ದು, ತಹಶೀಲ್ದಾರ್ ಅಶೋಕ್ ಗುರಾಣಿ ಹೆಚ್ಚು ಜನರು ಸೇರದಂತೆ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರದ ಆದೇಶಕ್ಕೆ ಸಹಕರಿಸಿ: ತಹಶೀಲ್ದಾರ್ ಅಶೋಕ ಗುರಾಣಿ ಮನವಿ - ಬೆಳಗಾವಿಯಲ್ಲಿ 144 ಸೆಕ್ಷನ್ ಜಾರಿ
ಬೆಳಗಾವಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಹುಕ್ಕೇರಿಯಲ್ಲಿ ಸಂತೆ ಮಾಡಲು ಮುಂದಾದ ಸಾರ್ವಜನಿಕರಿಗೆ ತಹಶೀಲ್ದಾರ್ ಅಶೋಕ ಗುರಾಣಿ ಸಂತೆ ಮಾಡದೇ ಸರ್ಕಾರದ ಆದೇಶ ಪಾಲಿಸುವಂತೆ ಮನವಿ ಮಾಡಿಕೊಂಡರು.

ಅಶೋಕ ಗುರಾಣಿ
ಸಾರ್ವಜನಿಕರು ಹುಕ್ಕೇರಿಯಲ್ಲಿ ಸಂತೆ ಮಾಡಲು ಮುಂದಾದಾಗ ಸ್ವತಃ ಹುಕ್ಕೇರಿ ತಹಶೀಲ್ದಾರ್ ಅಶೋಕ ಗುರಾಣಿ ಬಂದು ಸಂತೆ ನಡೆಸಬಾರದು ಎಂದು ಮನವಿ ಮಾಡಿಕೊಂಡರು. ಇನ್ನು ಹೋಟೆಲ್ನಲ್ಲಿ ಪಾರ್ಸಲ್ ಮಾತ್ರ ನೀಡಲು ಅವಕಾಶವಿದ್ದು, ಅಲ್ಲಿಯೇ ಜನರಿಗೆ ಆಹಾರ ನೀಡಿ ತಿನ್ನುವಂತೆ ಮಾಡುವುದು ಅಪರಾಧ. ಅಂತಹ ಹೋಟೆಲ್ಗಳಿಗೆ ತೆರಳಿ ತೆರವು ಮಾಡಿಸಿದರು.
ತಹಶೀಲ್ದಾರ್ ಅಶೋಕ್ ಗುರಾಣಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ತಿಳಿ ಹೇಳಿದರು
ಈಗಾಗಲೇ ದೇವಸ್ಥಾನಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಹೋಗುವುದನ್ನು ನಿಷೇಧಿಸಲಾಗಿದೆ. ಅದರಂತೆ ಮಸೀದಿಗಳಲ್ಲಿ ಕೂಡಾ ಐದಕ್ಕಿಂತ ಹೆಚ್ಚು ಜನರು ಸೇರ ಬೇಡಿ ಎಂದು ಹೇಳಿದರು.