ಕರ್ನಾಟಕ

karnataka

ETV Bharat / state

ಸಾಮಾನ್ಯ ಜನರಿಗಿಲ್ಲ ಬಜೆಟ್​ನಲ್ಲಿ ಕೊಡುಗೆ: ಲಕ್ಷ್ಮಿ ಹೆಬ್ಬಾಳಕರ್ - undefined

ಪ್ರಸಕ್ತ ಆರ್ಥಿಕ ವರ್ಷದ 8 ತಿಂಗಳ ಬಜೆಟ್ ಮಂಡಿಸುವ ಬದಲು ಮುಂದಿನ 5 ವರ್ಷದ ಯೋಜನೆ ಎನ್ನುವಂತೆ ಬಿಂಬಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ. ಒಟ್ಟಾರೆ ಈ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದ್ದು ಜನರು ಭ್ರಮನಿರಸನಗೊಳ್ಳುವಂತಾಗಿದೆ- ಹೆಬ್ಬಾಳಕರ್.

ಲಕ್ಷ್ಮಿ ಹೆಬ್ಬಾಳಕರ್

By

Published : Jul 5, 2019, 10:14 PM IST

ಬೆಳಗಾವಿ:ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಮತ್ತೊಮ್ಮೆ ಬಹುಮತ ನೀಡಿದ್ದರು. ಆದರೆ ಇಂದು ಮಂಡನೆಯಾದ ಕೇಂದ್ರದ ಬಜೆಟ್ ಜನರ ನಿರೀಕ್ಷೆಗಳನ್ನೆಲ್ಲಾ ಹುಸಿಯಾಗಿಸಿದೆ ಎಂದು ಶಾಸಕಿ ಹಾಗೂ ಮೈಸೂರು ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.

ಜನಸಾಮಾನ್ಯರಿಗೆ ಬಜೆಟ್​ನಲ್ಲಿ ಏನೂ ಕೊಟ್ಟಿಲ್ಲ. ಪೆಟ್ರೋಲ್, ಡಿಸೆಲ್, ಆಟೋಮೊಬೈಲ್ ಉಪಕರಣಗಳ ಬೆಲೆಯನ್ನು ಮತ್ತಷ್ಟು ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಿನ ಅಗತ್ಯವಾದ ಉದ್ಯಮ ವಲಯದ ಅಭಿವೃದ್ಧಿಗಾಗಲಿ, ಹೊಸ ಉದ್ಯೋಗ ಸೃಷ್ಟಿಗಾಗಲಿ ಬಜೆಟ್​ನಲ್ಲಿ ಕೊಡುಗೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details