ಕರ್ನಾಟಕ

karnataka

ETV Bharat / state

ಕಾಮಗಾರಿಯ ಬಿಲ್ ​ವಿಳಂಬ ಆರೋಪ: ಬೆಳಗಾವಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ - ಲೋಕೋಪಯೋಗಿ ಇಲಾಖೆ ಬಿಲ್ ​ವಿಳಂಬ

ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆ ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು.

contractor-attempts-suicide-in-belagavi
ಕಾಮಗಾರಿಯ ಬಿಲ್ ​ವಿಳಂಬ ಆರೋಪ: ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

By ETV Bharat Karnataka Team

Published : Oct 11, 2023, 5:55 PM IST

Updated : Oct 11, 2023, 6:39 PM IST

ಬೆಳಗಾವಿ:ಕಾಮಗಾರಿಯ ಬಿಲ್ ​ವಿಳಂಬವಾಗಿದೆ ಎಂದು ಆರೋಪಿಸಿದ ಗುತ್ತಿಗೆದಾರನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಇಂದು (ಮಂಗಳವಾರ) ನಡೆದಿದೆ. ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದ ನಾಗಪ್ಪ ಬಂಗಿ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ.

ಬಿಲ್ ​ವಿಳಂಬವಾಗಿದೆ ಎಂದು ಆರೋಪಿಸಿದ ನಾಗಪ್ಪ ಲೋಕೋಪಯೋಗಿ ಇಲಾಖೆ ಕಚೇರಿಯ ಮುಂದೆ ಕುಟುಂಬಸಹಿತ ಪ್ರತಿಭಟನೆ ನಡೆಸುತ್ತಿದ್ದರು. ''2022ರಲ್ಲಿ ಹಲಗಾ ಗ್ರಾಮದಿಂದ ತಿಗಡಿ ಗ್ರಾಮದವರೆಗೆ ರಸ್ತೆ ಮಾಡಲಾಗಿತ್ತು. ಈ ರಸ್ತೆ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆ ವರ್ಕ್ ಆರ್ಡರ್ ಕೊಟ್ಟಿತ್ತು. ಆದರೆ, ಕಾಮಗಾರಿ ಮುಗಿದಿದ್ದರೂ ಬಿಲ್​ ವಿಳಂಬ ಮಾಡಲಾಗುತ್ತಿದೆ'' ಎಂದು ನಾಗಪ್ಪ ಪ್ರತಿಭಟನೆ ವೇಳೆ ಆರೋಪ ಮಾಡಿದ್ದರು. ಬಳಿಕ ಅಲ್ಲಿದ್ದವರು ತಡೆದರೂ ನಾಗಪ್ಪ ಆತ್ಮಹತ್ಯೆಗೆ ಯತ್ನಿಸಿದ್ದರು.

ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ:ಅಕ್ರಮ ಜಾಹೀರಾತು ತಡೆಯುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಮ: ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ

Last Updated : Oct 11, 2023, 6:39 PM IST

ABOUT THE AUTHOR

...view details