ಕರ್ನಾಟಕ

karnataka

ETV Bharat / state

ಬೆಳಗಾವಿಲ್ಲಿ ಮುಂದುವರೆದ ವರುಣನ ಆರ್ಭಟ - ವರುಣನ ಆರ್ಭಟ

ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ನಗರದ ಜನತೆ ದಿನನಿತ್ಯದ ಕೆಲಸಕ್ಕೂ ಅಡ್ಡಿಯಾಗಿದೆ.

ಬೆಳಗಾವಿ: ಎರಡನೇ ದಿನವೂ ಮುಂದುವರೆದ ಮಳೆ

By

Published : Jul 29, 2019, 8:59 PM IST

ಬೆಳಗಾವಿ: ಕಳೆದ ಎರಡು ದಿನಗಳಿಂದ ನಗರದಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನರು ಸಾಕಪ್ಪ ಸಾಕು ಎನ್ನುವ ರೀತಿಯಲ್ಲಿ ಮಳೆರಾಯ ತನ್ನ ಆರ್ಭಟ ಮುಂದುವರೆಸಿದ್ದಾನೆ. ಹಗಲು ರಾತ್ರಿ ಎನ್ನದೆ ನಿರಂತರವಾಗಿ ಮಳೆಯಾಗುತ್ತಿದ್ದು, ನಗರದ ಜನತೆಯ ದಿನನಿತ್ಯದ ಕೆಲಸಕ್ಕೂ ಅಡ್ಡಿಯಾಗಿದೆ.

ಬೆಳಗಾವಿ: ಎರಡನೇ ದಿನವೂ ಮುಂದುವರೆದ ಮಳೆ..

ಕಳೆದ ಹದಿನೈದು ದಿನಗಳಿಂದ ನಗರದಲ್ಲಿ ಮಳೆರಾಯನ ಆಗಮನ ಇರಲಿಲ್ಲ. ಆದರೆ ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು,ಎರಡನೇ ದಿನವೂ ಮಳೆ ಮುಂದುವರೆದು ಜನರಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಉಂಟುಮಾಡಿದೆ. ನಗರದ ಅನೇಕ ಕಡೆ ಚರಂಡಿಗಳ ಅವ್ಯವಸ್ಥೆ ಇದ್ದು, ಸರಿಯಾಗಿ ಮಳೆ ನೀರು ಹೋಗುವ ವ್ಯವಸ್ಥೆ ಇಲ್ಲವಾಗಿದೆ. ಇದರಿಂದ ಜನರಿಗೆ ತೊಂದರೆಯಾಗಿದೆ.

ನಿರಂತರ ಸುರಿಯುತ್ತಿರುವ ಮಳೆಯಿಂದ ನಗರದ ಜನತೆಗೆ ರೋಗಗಳು ಹರಡುವ ಭೀತಿ ಎದುರಾಗಿದೆ. ಮನೆಗಳ ಪಕ್ಕದಲ್ಲಿ ಮಳೆ ನೀರು ಶೇಖರಣೆ ಆಗುತ್ತಿದ್ದು, ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

...view details