ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಎರಡು ಪ್ರಯೋಗಾಲಯ ಸ್ಥಾಪನೆ

ಗುಣಮಟ್ಟದ ನೀರು ಪೂರೈಸುವ ನಿಟ್ಟಿನಲ್ಲಿ ಬೆಳಗಾವಿಯ ಹಿಡಕಲ್​ನ ಬಸವಣ್ಣ ಕೊಳ್ಳದಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕ​​​​ ಮತ್ತು ಲಕ್ಷ್ಮಿ ಟಿಕಡಿಯಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕದಲ್ಲಿ ಜಲ ಮಂಡಳಿಯು ಪ್ರಯೋಗಾಲಯ ಸ್ಥಾಪಿಸಿದೆ.

water
ನೀರು

By

Published : Dec 26, 2020, 4:44 PM IST

ಬೆಳಗಾವಿ:ನಗರ ನಿವಾಸಿಗಳಿಗೆ ಗುಣಮಟ್ಟದ ನೀರು ಪೂರೈಸುವ ಸಲುವಾಗಿ ಜಲ ಮಂಡಳಿಯು ಹಿಡಕಲ್​​​​ ಮತ್ತು ಲಕ್ಷ್ಮಿ ಟಿಕಡಿಯಲ್ಲಿ ಎರಡು ಪ್ರಯೋಗಾಲಯಗಳನ್ನು ಸ್ಥಾಪಿಸಿದೆ.

ನಗರದ ಅರ್ಧ ಭಾಗಕ್ಕೆ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ನೀರನ್ನು ಬಸವಣ್ಣ ಕೊಳ್ಳದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಹಾಗೂ ಉಳಿದ ಭಾಗಕ್ಕೆ ರಕ್ಕಸಕೊಪ್ಪ ಜಲಾಶಯದ ನೀರನ್ನು ಲಕ್ಷ್ಮಿ ಟಿಕಡಿಯ ಶುದ್ಧೀಕರಣ ಘಟಕದಲ್ಲಿ ಸ್ಥಾಪಿಸಲಾಗಿರುವ ಪ್ರಯೋಗಾಲಯಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಇಲ್ಲಿ ಗುಣಮಟ್ಟ ಪರೀಕ್ಷೆಗೊಳಪಟ್ಟ ನೀರನ್ನೇ ನಗರದ ಜನರಿಗೆ ಪೂರೈಸಲಾಗುತ್ತಿದೆ.

ಇದನ್ನೂ ಓದಿ...ಬೆಳಗಾವಿಯಲ್ಲಿ ಚಿಗುರು ಕಾರ್ಯಕ್ರಮ; ಚಿಣ್ಣರ ಪ್ರತಿಭೆ ಅನಾವರಣ

ಗುಣಮಟ್ಟ ಪರೀಕ್ಷೆ ಹೇಗೆ?:ಜಲಾಶಯದಿಂದ ಘಟಕಕ್ಕೆ ಬರುವ ನೀರನ್ನು ಕೆಮಿಕಲ್ ಮತ್ತು ಬಯೋಲಾಜಿಕಲ್ ಪರೀಕ್ಷೆಗೆ ಒಳಪಡಿಸಿ ಶುದ್ಧೀಕರಿಸಲಾಗುತ್ತದೆ. ನಂತರ ನೀರಿನ ವಾಸನೆ ಹಾಗೂ ಸ್ವಾದವನ್ನು ಪರೀಕ್ಷೆ ಮಾಡಲಾಗುತ್ತದೆ. ಬಳಿಕ ಜಲಾಶಯದ ನೀರಲ್ಲಿ ಬ್ಯಾಕ್ಟೀರಿಯಾ ಸೇರಿರುವ ಕಾರಣ ಅವುಗಳನ್ನು ಕೊಲ್ಲಲು ಕ್ಲೋರಿನ್ ಸಿಂಪಡಿಸಲಾಗುತ್ತದೆ.

ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್

ಎಲ್ಲಾ ವಾರ್ಡ್‍ಗಳಿಗೂ ವಿಸ್ತರಣೆ:ಸದ್ಯ 10 ವಾರ್ಡ್‍ಗಳಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಜಾರಿಯಲ್ಲಿದ್ದು (ಐದು ವರ್ಷಗಳ ಹಿಂದೆ), ಉಳಿದ ವಾರ್ಡ್‍ಗಳಿಗೆ ಎರಡು ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಉಳಿದ ವಾರ್ಡ್‍ಗಳಿಗೂ ವಿಸ್ತರಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ವಿಶ್ವಬ್ಯಾಂಕ್ ಕೂಡ ನೆರವು ಘೋಷಿಸಿದೆ.

ವಿಶ್ವಬ್ಯಾಂಕ್ ಶೇ. 75ರಷ್ಟು ನೆರವು ಹಾಗೂ ಶೇ. 25ರಷ್ಟು ಪಾಲಿಕೆ ಹಣದಲ್ಲಿ ಎಲ್ಲಾ ವಾರ್ಡ್‍ಗಳಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಮಾರ್ಚ್‍ನಿಂದ ಈ ಯೋಜನೆಗೆ ಚಾಲನೆ ದೊರೆಯಲಿದ್ದು, ಐದು ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ABOUT THE AUTHOR

...view details