ಕರ್ನಾಟಕ

karnataka

ETV Bharat / state

ಬೆಳಗಾವಿ: ಕರ್ತವ್ಯ ಮುಗಿಸಿ ಕನ್ಯೆ ನೋಡಲು ಹೊರಟಿದ್ದ ಕಾನ್ಸ್​ಟೇಬಲ್ ರಸ್ತೆ ಅಪಘಾತದಲ್ಲಿ ಸಾವು - ಬೈಕ್​ ಅಪಘಾತದಲ್ಲಿ ಕಾನ್ಸ್​ ಸಾವು

ಕನ್ಯೆ ನೋಡುವುದಕ್ಕೆ ತೆರಳುವ ಖುಷಿಯಲ್ಲಿದ್ದ ಕುಟುಂಬ ಇದೀಗ ಕಾನ್ಸ್​ಟೇಬಲ್​ ಆನಂದ್​ ಸಾವಿನಿಂದ ಆಘಾತಕ್ಕೊಳಗಾಗಿದೆ. ಘಟನಾ ಸ್ಥಳಕ್ಕೆ ಅಂಕಲಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Constable died in Road accident in Belagavi
ಕಾನ್ಸ್​ಟೇಬಲ್ ರಸ್ತೆ ಅಪಘಾತದಲ್ಲಿ ಸಾವು

By

Published : Dec 8, 2021, 5:24 PM IST

ಬೆಳಗಾವಿ:ಸೇತುವೆಯ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್‌ ಕಾನ್ಸಸ್ಟೇಬಲ್ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಪಾಶ್ಚಾಪುರ-ಅಂಕಲಗಿ ರಸ್ತೆಯಲ್ಲಿ ಇಂದು ಸಂಭವಿಸಿದೆ.

ಗೋಕಾಕ್ ತಾಲೂಕಿನ ಅಂಕಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ‌‌. ಗೋಕಾಕ್​ ಗ್ರಾಮೀಣ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆನಂದ ಸುಳಧಾಳ (24) ಮೃತರು. ಆನಂದ ಗೋಕಾಕ್​ ತಾಲೂಕಿನ ಹುದಲಿ ಗ್ರಾಮದ ನಿವಾಸಿಯಾಗಿದ್ದು, ಕರ್ತವ್ಯ ಮುಗಿಸಿ ಬೆಳಗ್ಗೆ ಮನೆಗೆ ತೆರಳಿದ್ದರು. ನಂತರ ಕನ್ಯೆ ನೋಡಲು ಹೊರಟಿದ್ದರು. ಈ ಸಂದರ್ಭದಲ್ಲಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಆದರೆ ಕನ್ಯೆ ನೋಡುವುದಕ್ಕೆ ತೆರಳುವ ಖುಷಿಯಲ್ಲಿದ್ದ ಕುಟುಂಬ ಇದೀಗ ಆನಂದ್​ ಸಾವಿನಿಂದ ಆಘಾತಕ್ಕೊಳಗಾಗಿದೆ. ಘಟನಾ ಸ್ಥಳಕ್ಕೆ ಅಂಕಲಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮತಾಂತರ ಆತಂಕ: ಮಡದಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ

ABOUT THE AUTHOR

...view details