ಕರ್ನಾಟಕ

karnataka

By

Published : Apr 8, 2021, 5:23 PM IST

Updated : Apr 8, 2021, 6:22 PM IST

ETV Bharat / state

ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ​ 2 ರಿಂದ 3 ಲಕ್ಷ ಮತಗಳ ಅಂತರದ ಗೆಲುವು: ಎಂ.ಬಿ. ಪಾಟೀಲ್

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಸಮರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯು 2 ರಿಂದ 3 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ಹಿಂದೆ ಸಿಎಂ ಆಗಿದ್ದ ಜಗದೀಶ್​ ಶೆಟ್ಟರ್ ಮರಳಿ ಸಚಿವರಾಗಿದ್ದಾರೆ. ಶಾಸಕರಾದ ಅರವಿಂದ ಬೆಲ್ಲದ್, ಶಂಕರ ಪಾಟೀಲ್ ಮುನೇನಕೊಪ್ಪ ಅವರನ್ನು ಮಂತ್ರಿ ಮಾಡಿದ್ದರೆ, ಶೆಟ್ಟರ್ ಇಮೇಜ್ ಇನ್ನೂ ಹೆಚ್ಚಾಗುತ್ತಿತ್ತು ಎಂದು ಶೆಟ್ಟರ್​​ಗೆ​ ತಿರುಗೇಟು ನೀಡಿದರು.

congress-will-win-in-belagavi-lok-sabha-election-m-b-patil
ಎಂ.ಬಿ.ಪಾಟೀಲ್

ಬೆಳಗಾವಿ: ಲೋಕಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಶ್ಚಿತವಾಗಿ ಎರಡರಿಂದ ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದೆ ಎಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್​ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸತೀಶ್​​ ಜಾರಕಿಹೊಳಿಗೆ ಮತದಾರರು ಸ್ವಯಂಪ್ರೇರಿತವಾಗಿ ಮತ್ತು ಬಿಜೆಪಿ ಕಾರ್ಯಕರ್ತರು ಕೂಡ ಬೆಂಬಲಿಸುತ್ತಿದ್ದಾರೆ. ಹೀಗಾಗಿ ನಾವು ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದರು.

ಎಂ.ಬಿ. ಪಾಟೀಲ್ ಪ್ರತಿಕ್ರಿಯೆ

ಈ ಹಿಂದೆ ಸಿಎಂ ಆಗಿದ್ದ ಜಗದೀಶ್​ ಶೆಟ್ಟರ್ ಮರಳಿ ಸಚಿವರಾಗಿದ್ದಾರೆ. ಶಾಸಕರಾದ ಅರವಿಂದ ಬೆಲ್ಲದ್, ಶಂಕರ ಪಾಟೀಲ್ ಮುನೇನಕೊಪ್ಪ ಅವರನ್ನು ಮಂತ್ರಿ ಮಾಡಿದ್ದರೆ, ಶೆಟ್ಟರ್ ಇಮೇಜ್ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ಶೆಟ್ಟರ್​​ಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯನವರು ಮಾಸ್ ಲೀಡರ್, ಅವರು ಪ್ರಚಾರಕ್ಕೆ ಬಂದ್ರೆ ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಾಗುತ್ತದೆ. ಹೀಗಾಗಿ ರಾಮದುರ್ಗ, ಸವದತ್ತಿಯಲ್ಲಿ ಪ್ರಚಾರ ಹಾಕಿಕೊಂಡಿದ್ದಾರೆ. ಅಲ್ಲಿ ಬೃಹತ್ ಪ್ರಚಾರ ಸಭೆ ಹಮ್ಮಿಕೊಂಡಿದ್ದೇವೆ. ಎರಡು ದಿನ ಪ್ರಚಾರ ನಡೆಸಲಿದ್ದಾರೆ. ಇದರಿಂದ ನಮಗೆ ಮತ್ತಷ್ಟು ಅನುಕೂಲ ಆಗುತ್ತದೆ. ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಗೆ ಒಳ್ಳೆಯ ಯೋಜನೆ ಕೊಟ್ಟಿದ್ದರು. ಅವರ ಸುಭದ್ರ, ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಜನರು ಮರೆತಿಲ್ಲ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಜನರಿಗೆ ಬೇಸರವಿದೆ. ಹೀಗಾಗಿ ಬೆಳಗಾವಿಯಿಂದಲೇ ಒಂದು ಸ್ಪಷ್ಟ ಸಿಗ್ನಲ್ ಹೋಗುತ್ತದೆ ಎಂದು ಹೇಳಿದರು.

ಲಿಂಗಾಯತ ಮತಗಳನ್ನು ಯಾವ ರೀತಿ ಕಾಂಗ್ರೆಸ್ ಪಕ್ಷದ ಕಡೆ ಸೆಳೆಯುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್‍, ಲಕ್ಷ್ಮೀ ಹೆಬ್ಬಾಳ್ಕರ್, ಮಹಾಂತೇಶ ಕೌಜಲಗಿ, ನಾನು, ಪ್ರಕಾಶ ಹುಕ್ಕೇರಿ, ಗಡದೇವರಮಠ ಸೇರಿದಂತೆ ನಾವೆಲ್ಲಾ ಲಿಂಗಾಯತರಿದ್ದೇವೆ. ಹೀಗಾಗಿ ಲಿಂಗಾಯತ ಒಲವು ಕೂಡ ಕಾಂಗ್ರೆಸ್ ಪಕ್ಷದ ಕಡೆಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಹನುಮ ಹುಟ್ಟಿದ್ದು ಕಿಷ್ಕಿಂಧೆಯಲ್ಲಿ ಅಲ್ಲ, ತಿರುಪತಿಯ ಅಂಜನಾದ್ರಿಯಲ್ಲಿ: ಟಿಟಿಡಿ ಸ್ಪಷ್ಟನೆ

Last Updated : Apr 8, 2021, 6:22 PM IST

ABOUT THE AUTHOR

...view details