ಚಿಕ್ಕೋಡಿ: ರಾಜ್ಯಾದ್ಯಂತ ಉಪ ಚುನಾವಣೆಯ ಪ್ರಚಾರ ಕಾವೇರಿದ್ದು, ಮತದಾರರ ಮನವೊಲಿಕೆಗೆ ಎಲ್ಲ ಪಕ್ಷಗಳ ನಾಯಕರ ಕಸರತ್ತು ಶುರುವಾಗಿದೆ.
ಚಿಕ್ಕೋಡಿಯಲ್ಲಿ ರಾಜು ಕಾಗೆ ಶಕ್ತಿ ಪ್ರದರ್ಶನ, ಹುಕ್ಕೇರಿ ಗೈರು - by election lates news in karnataka
ಗಡಿನಾಡಲ್ಲಿ ಗರಿಗೆದರಿದ ಉಪಚುನಾವಣೆ ಪ್ರಚಾರದ ಅಬ್ಬರ. ಕಾಗವಾಡ ತಾಲ್ಲೂಕಿನ ಉಗಾರ ಪಟ್ಟಣದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದ ನೂರಾರು ಕಾರ್ಯಕರ್ತರು.
ಗಡಿನಾಡಲ್ಲಿ ಕಾಂಗ್ರೆಸ್ ಪ್ರಚಾರ
ಗಡಿನಾಡು ಬೆಳಗಾವಿ ಜಿಲ್ಲೆ ಕಾಗವಾಡ ತಾಲ್ಲೂಕಿನ ಉಗಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಯಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಗೆ ಜೊತೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದರು.
ಇನ್ನೂ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ರಾಜು ಕಾಗೆ ಅವರು ಹಮ್ಮಿಕೊಂಡಿದ್ದ ಪ್ರಚಾರ ಸಭೆಗೆ ಗೈರಾಗಿದ್ದು, ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.