ಚಿಕ್ಕೋಡಿ:ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಇನ್ನಿತರ ಅತ್ಯವಶ್ಯಕ ಸಾಮಗ್ರಿಗಳ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಪಟ್ಟಣದಲ್ಲಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.
ಪಟ್ಟಣದ ಬಸವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಇದೇ ವೇಳೆ ಕಾರ್ಯಕರ್ತನೊಬ್ಬ ತೊಡಲು ಬಟ್ಟೆ ಮಾತ್ರ ನಮ್ಮ ಬಳಿ ಉಳಿದಿವೆ. ಅವನ್ನು ಕೂಡ ಕಸಿದುಕೊಳ್ಳಿ. ಮೋದಿಯವರೇ ಅಚ್ಛೆ ದಿನ ಬರುತ್ತೆ, ಬರುತ್ತೆ ಅಂತಾ ಹೇಳ್ತಾನೆ ಇದೀರಿ. ಎಲ್ಲಿದೆ ನಿಮ್ಮ ಅಚ್ಛೆ ದಿನ ಇಲ್ಲಿ ಬಡವರು ಒಂದು ದಿನದ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಅಂತದರಲ್ಲಿ ನೀವು ದಿನ ಬಳಕೆ ಸಾಮಗ್ರಿಗಳ ಬೆಲೆ ಏರಿಕೆ ಮಾಡುತ್ತಿದ್ದೀರಿ ಎಲ್ಲಿದೇ ನಿಮ್ಮ ಅಚ್ಛೆ ದಿನ ಎಂದು ತೊಟ್ಟಿರುವ ಅಂಗಿಯನ್ನು ಬಿಚ್ಚಿ ಕಿಡಿಕಾರಿದರು.
ಕಾಂಗ್ರೆಸ್ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಕೆಲಕಾಲ ಟ್ರಾಫಿಕ್ ನಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತ ಪ್ರಸಂಗ ಎದುರಾಯಿತು.