ಕರ್ನಾಟಕ

karnataka

ETV Bharat / state

ಅಥಣಿಯಲ್ಲಿ ನಡೆದ ಕೈ ಸಭೆ: ಅನರ್ಹರ ವಿರುದ್ಧ ಗುಡುಗಿದ ಕಾಂಗ್ರೆಸ್ ನಾಯಕರು! - ಕಾಂಗ್ರೆಸ್​ ಲೆಟೆಸ್ಟ್​ ನ್ಯೂಸ್​

ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಅಭ್ಯರ್ಥಿಗಳ ಪರ ನಾಯಕರ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ನಡೆದ ಕಾಂಗ್ರೆಸ್ ಸಭೆಯಲ್ಲಿ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದು, ಅನರ್ಹರ ವಿರುದ್ಧ ಗುಡುಗಿದರು.

ಕಾಂಗ್ರೆಸ್ ಸಭೆ
Congress meeting

By

Published : Nov 30, 2019, 9:22 AM IST

ಅಥಣಿ :ಮಹಾರಾಷ್ಟ್ರದ ಬಿಜೆಪಿ ರಾತ್ರೋರಾತ್ರಿ ಸರ್ಕಾರ ರಚನೆ ಮಾಡಿ ರಾತ್ರೋರಾತ್ರಿ ರಾಜೀನಾಮೆ ನೀಡಿ ಏನಾಗಿದೆ ಎಂದು ನೋಡಿದ್ದೀರಿ. ಇದನ್ನು ನಾವು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕಾಣುತ್ತೇವೆ ಎಂದು ವಿನಯ್ ಕುಲಕರ್ಣಿ ಭವಿಷ್ಯ ನುಡಿದರು.

ಅಥಣಿಯಲ್ಲಿ ನಡೆದ ಕಾಂಗ್ರೆಸ್​ ಸಭೆ

ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ತೇಲಸಂಗ ಗ್ರಾಮದಲ್ಲಿ ಕಾಂಗ್ರೆಸ್​ ಸಭೆ ನಡೆಸಿದ್ದು, ಈ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಬಿಜೆಪಿ ರಾತ್ರೋರಾತ್ರಿ ಸರ್ಕಾರ ರಚನೆ ಮಾಡಿ ರಾತ್ರೋರಾತ್ರಿ ರಾಜೀನಾಮೆ ನೀಡಿ ಏನಾಗಿದೆ ನೀವೇ ನೋಡಿದ್ದೀರಿ. ಇದನ್ನು ನಾವು ಕರ್ನಾಟಕದಲ್ಲೂ ಕಾಣುತ್ತೇವೆ ಎಂದರು. ಈ ಕ್ಷೇತ್ರದ ಉಪಚುನಾವಣೆ ಜನರ ತೀರ್ಪು ಒಂದು ಇತಿಹಾಸವಾಗಲಿ. ನಮ್ಮ ಅಭ್ಯರ್ಥಿ ಗಜಾನನ ಮಂಗಸೂಳಿ ಗೆಲ್ಲಿಸಿ ಎಂದು ಕರೆ ನೀಡಿದರು. ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು.

ಮಹೇಶ್ ಕುಮಟಳ್ಳಿ ವಿರುದ್ಧ ಗುಡುಗಿದ ಸುನೀಲ್ ಪಾಟೀಲ್:
ನಂತರ ಸುನೀಲ್ ಪಾಟೀಲ್​ ಮಾತನಾಡಿ, ಮಹೇಶ್ ಕುಮಟಳ್ಳಿ ತಮ್ಮ ಸ್ವ ಗ್ರಾಮ ತೆಲಸಂಗ ಜನರಿಗೆ ಶೌಚಾಲಯ ನಿರ್ಮಾಣ ಮಾಡದೇ ಅಥಣಿ ವಿಧಾನಸಭಾ ಕ್ಷೇತ್ರ ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಮಹೇಶ್ ಕುಮಟಳ್ಳಿ ವಿರುದ್ಧ ವಿಜಯಪುರದ ವಿಧಾನ ಪರಿಷತ್ ಸದಸ್ಯ ಸುನೀಲ್ ಪಾಟೀಲ್ ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಥಣಿ ಕ್ಷೇತ್ರದಲ್ಲಿ ಯಾವುದೇ ನೀರಾವರಿ ಯೋಜನೆ ಮಾಡಲು ಮಹೇಶ್ ಕುಮಟಳ್ಳಿಗೆ ಸಾಧ್ಯವಿಲ್ಲ. ಯಾಕೆ ಅಂದ್ರೆ ಮಹಾರಾಷ್ಟ್ರದಲ್ಲಿ ಸ್ವಿಮ್ಮಿಂಗ್ ಪೂಲ್​ನಲ್ಲಿದ್ದರು. ಅದಕ್ಕೆ ಈ ಗ್ರಾಮ ನೀರಾವರಿ ವಂಚಿತವಾಗಿದೆ ಎಂದು ಕಾಲೆಳೆದರು.

ನೀರು ಬೇಕು ಎಂದರೆ ಗಜಾನನ ಮಂಗಸೂಳಿ ಗೆಲ್ಲಿಸಿ. ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಅಥಣಿ ಕ್ಷೇತ್ರಕ್ಕೆ ನೀರಾವರಿ ಯೋಜನೆ ಈ ಗ್ರಾಮದಿಂದ ಪ್ರಾರಂಭ ಮಾಡುತ್ತಾರೆ ಎಂದರು.

ಧರ್ಮ ಹಾಗೂ ಅಧರ್ಮ ನಡುವೆ ನಡೆಯುತ್ತಿರುವ ಚುನಾವಣೆ: ಎಸ್ ಆರ್ ಪಾಟೀಲ್
ಬಳಿಕ ಎಸ್ ಆರ್ . ಪಾಟೀಲ್ ಮಾತನಾಡಿ, ಈ ಉಪಚುಣಾವಣೆ ಧರ್ಮ ಹಾಗೂ ಅಧರ್ಮಗಳ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಅನರ್ಹ ಎಂಬ ಹಣೆಪಟ್ಟಿ ಕಟ್ಟಿಕೊಂಡು ಜನರ ಮುಂದೆ ಬರುತ್ತಾರೆ. ಅದು ಹೇಗೆ ಬರುತ್ತಾರೋ. ಒಂದು ಸ್ವಲ್ಪ ಮನುಷ್ಯತ್ವ ಇಲ್ಲದ ಇರುವವರು ಅನರ್ಹರು. ಮಾರಾಟ ಆಗಿರುವುದು ಅನರ್ಹರು ಅವರಿಗೆ ಯಾವುದೇ ಅವಕಾಶ ನೀಡಬೇಡಿ ಎಂದು ಕರೆ ನೀಡಿದರು.

ABOUT THE AUTHOR

...view details