ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ನೆರೆ ಸಂತ್ರಸ್ತರ ಸಹಾಯಕ್ಕೆ ಮುಂದಾದ ಕಾಂಗ್ರೆಸ್ ಮುಖಂಡರು - ಅಥಣಿ ಕಾಂಗ್ರೆಸ್ ಮುಖಂಡರು

ಕಳೆದ ನಾಲ್ಕು ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ವಾಸ ಮಾಡುತ್ತಿರುವ ನೆರೆ ಸಂತ್ರಸ್ತರಿಗೆ ದವಸ ಧಾನ್ಯ ವಿತರಿಸುವ ಮೂಲಕ ನಿಮ್ಮ ಜೊತೆ ನಾವು ಹೋರಾಟ ಮಾಡಿ ಮನೆ ಹಕ್ಕು ಪತ್ರ ನೀಡಲು ಸಹಾಯ ಮಾಡುತ್ತೇವೆ ಎಂದು ಕಾಂಗ್ರೆಸ್​ ನಾಯಕರು ಭರವಸೆ ನೀಡಿದ್ದಾರೆ.

Congress leaders helps to flood victims
ನೆರೆ ಸಂತ್ರಸ್ತರ ಸಹಾಯಕ್ಕೆ ಮುಂದಾದ ಕಾಂಗ್ರೆಸ್ ಮುಖಂಡರು

By

Published : Dec 3, 2022, 10:18 AM IST

ಚಿಕ್ಕೋಡಿ(ಬೆಳಗಾವಿ): ಕಳೆದ 4 ವರ್ಷದಿಂದ ಮನೆ ಹಕ್ಕು ಪತ್ರ ವಿತರಣೆಯಾಗದೇ ಬಯಲು ಪ್ರದೇಶದಲ್ಲಿ ವಾಸಿಸುತ್ತಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿಕೆ ನಾಗನೂರು ನೆರೆ ಸಂತ್ರಸ್ತರ ಸಂಕಷ್ಟ ಆಲಿಸುವುದಕ್ಕೆ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ.

ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆಯಾಗಿರುವ ಪಿಕೆ ನಾಗನೂರ ಗ್ರಾಮಕ್ಕೆ ಅಂದಿನ ಸರ್ಕಾರ 2018ರಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಿ ಕೊಟ್ಯಂತರ ರೂ. ಖರ್ಚು ಮಾಡಿ ರಡ್ಡೇರಹಟ್ಟಿ ಗ್ರಾಮದಲ್ಲಿ 198 ಎಕರೆ ಪ್ರದೇಶದಲ್ಲಿ ಸ್ಥಳ ನಿಗದಿಪಡಿಸಿತ್ತು. ಆದರೆ ಅಂದಿನಿಂದ ಇವತ್ತಿನವರೆಗೂ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಹಕ್ಕು ಪತ್ರ ವಿತರಣೆ ಮಾಡಿಲ್ಲ. ಹೀಗಾಗಿ ತಮ್ಮ ಸ್ಥಳ ಎಲ್ಲಿ ಬರುತ್ತದೆ ಎಂದು ಗೊತ್ತಾಗದೆ ಪರದಾಡುವಂತಾಗಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ನೆರೆ ಸಂತ್ರಸ್ತರ ಸಹಾಯಕ್ಕೆ ಮುಂದಾದ ಕಾಂಗ್ರೆಸ್ ಮುಖಂಡರು

ಈ ಕುರಿತು 'ಈಟಿವಿ ಭಾರತ' ಕಳೆದ ನವೆಂಬರ್​ 28ರಂದು '4 ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ವಾಸ: ಮಾಜಿ ಡಿಸಿಎಂ ಹುಟ್ಟೂರಿನ ನೆರೆ ಸಂತ್ರಸ್ತರ ಬವಣೆ'ಎಂಬ ಶೀರ್ಷಿಕೆ ಅಡಿಯಲ್ಲಿ ಸಮಗ್ರ ವರದಿಯನ್ನು ಬಿತ್ತರ ಮಾಡುತ್ತಿದ್ದಂತೆ ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಹಲವು ಕಾಂಗ್ರೆಸ್​ ಕಾರ್ಯಕರ್ತರು ನೆರೆ ಸಂತ್ರಸ್ತರಿಗೆ ಹಕ್ಕುಪತ್ರ ಬರಲು ನಾವು ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿ, ದವಸ ಧಾನ್ಯ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ:ಕೊಡಗಿನಲ್ಲಿ ನಿರಾಶ್ರಿತರಿಗೆ ಮನೆ ಹಕ್ಕುಪತ್ರ ಹಸ್ತಾಂತರ

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಅಥಣಿ ತಾಲೂಕಿನ 17 ಹಳ್ಳಿಗಳ ನೆರೆ ಸಂತ್ರಸ್ತರಿಗೆ ಇಲ್ಲಿನ ಶಾಸಕರಾದ ಮಹೇಶ್ ಕುಮಟಳ್ಳಿ ಅನ್ಯಾಯ ಮಾಡುತ್ತಿದ್ದಾರೆ. 18 ವರ್ಷಗಳಿಂದ ಹಕ್ಕು ಪತ್ರ ವಿತರಣೆ ಮಾಡದಿರುವುದರಿಂದ ನೆರೆ ಸಂತ್ರಸ್ತರಿಗೆ ನೆಲೆ ಇಲ್ಲದಂತಾಗಿದ್ದು, ಬಯಲು ಪ್ರದೇಶದಲ್ಲಿ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ನಿರಂತರ ಪ್ರತಿಭಟನೆ ಮಾಡುತ್ತಾ ಬಂದಿದೆ. ಸರ್ಕಾರಕ್ಕೆ ಕಿವಿ, ಕಣ್ಣು ಇಲ್ಲದಂತಾಗಿರುವುದರಿಂದ ನೆರೆ ಸಂತ್ರಸ್ತರ ಬೇಡಿಕೆ ಸರ್ಕಾರಕ್ಕೆ ಹಾಗೂ ಸ್ಥಳೀಯ ಶಾಸಕರಿಗೆ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೂ ಕೇಳುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಮುಂದಿನ ಒಂದು ವಾರದಲ್ಲಿ ನೆರೆ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಮಾಡದಿದ್ದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ನೆರೆ ಸಂತ್ರಸ್ತರ ಜೊತೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ರವಾನಿಸಿದರು.

ABOUT THE AUTHOR

...view details