ಕರ್ನಾಟಕ

karnataka

ETV Bharat / state

ಉಪಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್, ಜೆಡಿಎಸ್ ನಾಯಕತ್ವಕ್ಕೆ ದೊಡ್ಡ ಪೆಟ್ಟು ಬೀಳಲಿದೆ: ಸಿಎಂ ಬಿಎಸ್​ವೈ - c m B s Yadiyurappa talks about Belgavi bye election 2021

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ‌ ಬಿಜೆಪಿ ನೂರಕ್ಕೆ ನೂರರಷ್ಟು ಮೂರ್ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.​

CM BSY
ಸಿ ಎಂ ಬಿ ಎಸ್ ಯಡಿಯೂರಪ್ಪ

By

Published : Apr 15, 2021, 9:52 PM IST

ಬೆಳಗಾವಿ: ಉಪಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್, ಜೆಡಿಎಸ್ ನಾಯಕತ್ವಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ‌ಮಾಧ್ಯಮದವರೊಂದಿಗೆ ಮಾತನಾಡಿದ ಅವರು,‌ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ‌ ಬಿಜೆಪಿ ನೂರಕ್ಕೆ ನೂರರಷ್ಟು ಮೂರ್ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತದೆ. ಇಂದು ನಡೆಸಿದ ಪಾದಯಾತ್ರೆ ಸಂದರ್ಭದಲ್ಲೂ ಜನ ಸ್ಪಂದಿಸಿದ ರೀತಿ ನೋಡಿದ್ರೆ ಬೆಳಗಾವಿ ನಗರದಲ್ಲೂ ನಮಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ ಎಂದರು.

ಸಿಎಂ ಬಿ.ಎಸ್.ಯಡಿಯೂರಪ್ಪ

ಬಹಳ ದೊಡ್ಡ ಅಂತರದಿಂದ ನಾವು ಗೆಲ್ಲುತ್ತೇವೆ. ಎರಡು ವಿಧಾನಸಭಾ ಉಪಚುನಾವಣೆಯಲ್ಲಿ 101 ಪರ್ಸೆಂಟ್ ನಾವೇ ಗೆಲ್ತೇವೆ. ಯಾವುದೇ ಅನುಮಾನ ಬೇಡ. ನಾನೇನಾದರೂ ಹೇಳಬೇಕಾದರೆ ಹತ್ತು ಬಾರಿ ಯೋಚನೆ ಮಾಡಿ ಹೇಳ್ತೀನಿ. ಪ್ರಚಾರಕ್ಕಾಗಿ ನಾನು ಮಾತನಾಡಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕತ್ವಕ್ಕೆ ಈ ಬಾರಿ ಬಹಳ ದೊಡ್ಡ ಪೆಟ್ಟು ಬೀಳಲಿದೆ. ಚುನಾವಣೆ ಫಲಿತಾಂಶ ಬಂದ ಮೇಲೆ ಅವರಿಗೆ ಪರಿಸ್ಥಿತಿ ಅರ್ಥವಾಗುತ್ತೆ ಎಂದರು.

ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಚಾರ ಸಭೆಯಲ್ಲಿ ಭಾಗವಹಿಸಬೇಕಿದ್ದ ಸಿಎಂ ಜ್ವರ ಹಾಗೂ ಸುಸ್ತಿನ ಹಿನ್ನೆಲೆ ಕೊನೆಯ ಚುನಾವಣಾ ಪ್ರಚಾರದ ಸಭೆಗೆ ಗೈರಾದರು. ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡು ನೇರವಾಗಿ ಖಾಸಗಿ ಹೋಟೆಲ್​ನಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಹೋದರು.

ಓದಿ:ಮತ್ತೊಮ್ಮೆ ಲಾಕ್​​​​ಡೌನ್ ಮಾಡಲು ಸಾಧ್ಯವಿಲ್ಲ, ಇಷ್ಟವೂ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ

ABOUT THE AUTHOR

...view details