ಬೆಳಗಾವಿ:ಮಹದಾಯಿ ಬಗ್ಗೆ ಕಾಂಗ್ರೆಸ್‌ನವರಿಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನವರಿಗೆ ಈಗ ಮಹದಾಯಿ ನೆನಪಾಗುತ್ತಿದೆ ಎಂದು ಶಾಸಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು. ಬೆಳಗಾವಿ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಾಧ್ಯಮದವರ ಜತೆಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಇದ್ದಾಗ ಮಹದಾಯಿ ಹೋರಾಟಗಾರರ ಮೇಲೆ ಗೋಲಿಬಾರ್ ಮಾಡಿಸಿದ್ದು ನೆನಪು ಮಾಡಿಕೊಳ್ಳಲಿ. ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ ಮಾಡಿ ನಗೆಪಾಟೀಲಿಗೆ ಈಡಾಗಿದ್ದರು.
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ದ್ದು ಡಬಲ್ ಸ್ಟ್ಯಾಂಡ್: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ - ಕೊರೋನಾ
ಮಹದಾಯಿ ಬಗ್ಗೆ ಕಾಂಗ್ರೆಸ್‌ನವರಿಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನವರಿಗೆ ಈಗ ಮಹದಾಯಿ ನೆನಪಾಗುತ್ತಿದೆ ಎಂದು ಶಾಸಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಡಬಲ್ ಸ್ಟ್ಯಾಂಡ್:ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ದ್ದು ಡಬಲ್ ಸ್ಟ್ಯಾಂಡ್ ಅನುಸರಿಸುತ್ತಿದೆ. ಸೋನಿಯಾ ಗಾಂಧಿ ಗೋವಾದಲ್ಲಿ ಒಂದು ಹೇಳಿಕೆ ನೀಡ್ತಾರೆ. ಕರ್ನಾಟಕದಲ್ಲಿ ಇನ್ನೊಂದು ಹೇಳಿಕೆ ಕೊಡ್ತಾರೆ. ಇವರಿಗೆ ಮಹದಾಯಿ ಮೇಲೆ ನಿಜವಾದ ಪ್ರೀತಿ ಇದ್ದರೆ ಗೋವಾದ ಕಾಂಗ್ರೆಸ್‌ನವರಿಂದ ಯೋಜನೆ ಬಗ್ಗೆ ಯಾವುದೇ ತಂಟೆಗಳಿಲ್ಲ ಎಂದು ಹೇಳಿಕೆ ಕೊಡಿಸಲಿ ಎಂದು ಸವಾಲ್ ಹಾಕಿದರು.
ಕೊರೋನಾ ವಿಚಾರ: ಕೋವಿಡ್ ವಿಷಯದಲ್ಲಿ ಯಾವುದೇ ರಾಜಕೀಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸಭೆ ನಡೆಸಿ ದೇಶಕ್ಕೆ ಸಂದೇಶ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಯಾತ್ರೆ ನೋಡಿ ಪ್ರಧಾನಿಗಳು ಮೀಟಿಂಗ್ ಮಾಡಿಲ್ಲ. ಎಲ್ಲ ವಿಷಯಗಳಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹುಟ್ಟು ಹಬ್ಬದ ದಿನ ನನ್ನ ತಂಟೆಗೆ ಯಾರೇ ಬಂದರೂ ಸುಮ್ಮನೆ ಬಿಡುವುದಿಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ವಿಷಯ ಯಾರಿಗೆ ಮುಟ್ಟಬೇಕು, ಅವರಿಗೆ ಮುಟ್ಟಿದೆ. ಸಮಯ ಬಂದಾಗ ಯಾರು ಎಂಬುದನ್ನು ಬಹಿರಂಗಪಡಿಸುತ್ತೇನೆ. ಸ್ವಪಕ್ಷೀಯವರಾ ಎಂಬ ಪತ್ರಕರ್ತರ ಪ್ರಶ್ನೆಗೆ ನಗುತ್ತಲೇ ಪ್ರತಿಕ್ರಿಯೆ ಶೆಟ್ಟರ್ ನೀಡಿದರು.
ಇದನ್ನೂ ಓದಿ:ವಿನಾಶಕಾರಿ ನೀತಿಗಳಿಂದ ಅವಸಾನದತ್ತ ಸಾಗಿದ ಕೃಷಿ: ಹೆಚ್ ಡಿ ಕುಮಾರಸ್ವಾಮಿ