ಕರ್ನಾಟಕ

karnataka

ETV Bharat / state

ಮಹೇಶ್ ಕುಮಟಳ್ಳಿ ಭಸ್ಮಾಸುರ, ಅವರಿಂದ ಬಿಜೆಪಿ ಭಸ್ಮ: ಗಜಾನನ ಮಂಗಸೂಳಿ ಭವಿಷ್ಯ - ಅಥಣಿಯಲ್ಲಿ ಪ್ರಚಾರ ಮಾಡಿದ ಗಜಾನನ ಮಂಗಸೂಳಿ ಲೆಟೆಸ್ಟ್ ನ್ಯೂಸ್

ಅಥಣಿ ಉಪ ಚುನಾವಣಾ ರಂಗೇರಿದ್ದು, ಅಭ್ಯರ್ಥಿಗಳು ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದು, ಕಾಂಗ್ರೆಸ್​ ಅಭ್ಯರ್ಥಿ ಗಜಾನನ ಮಂಗಸೂಳಿ ಮಹೇಶ್ ಕುಮಟಳ್ಳಿ ಒಬ್ಬ ಭಸ್ಮಾಸುರ, ಅವರು ಕಾಲು ಇಟ್ಟಲ್ಲಿ ಭಸ್ಮವಾಗುವುದು, ಬಿಜೆಪಿ ಪಕ್ಷವನ್ನು ಭಸ್ಮ ಮಾಡೋದು ಖಚಿತ ಎಂದು ಲೇವಡಿ ಮಾಡಿದ್ದಾರೆ.

Gajanana Mangasuli
ಗಜಾನನ ಮಂಗಸೂಳಿ

By

Published : Dec 2, 2019, 8:17 AM IST

ಅಥಣಿ :ಮಹೇಶ್ ಕುಮಟಳ್ಳಿ ಒಬ್ಬ ಭಸ್ಮಾಸುರ, ಅವರು ಬಿಜೆಪಿ ಪಕ್ಷವನ್ನು ಭಸ್ಮ ಮಾಡೋದು ಖಚಿತ ಎಂದ ಕಾಂಗ್ರೆಸ್​ ಅಭ್ಯರ್ಥಿ ಗಜಾನನ ಮಂಗಸೂಳಿ ವ್ಯಂಗ್ಯವಾಡಿದರು.

ಕಾಂಗ್ರೆಸ್​ ಅಭ್ಯರ್ಥಿ ಗಜಾನನ ಮಂಗಸೂಳಿ

ಅಥಣಿ ಪೂರ್ವ ಭಾಗದ ಗ್ರಾಮಗಳಲ್ಲಿ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ಮಹೇಶ್ ಕುಮಟಳ್ಳಿ ಭಸ್ಮಾಸುರ ಇದ್ದ ಹಾಗೆ. ಅವರು ಕಾಲು ಇಟ್ಟಲ್ಲಿ ಎಲ್ಲವೂ ಭಸ್ಮ ಆಗುತ್ತದೆ. ಈಗ ಬಿಜೆಪಿಗೆ ಕಾಲಿಟ್ಟಿದ್ದಾರೆ. ಅದನ್ನು ಭಸ್ಮ ಮಾಡೋದು ಖಚಿತ ಎಂದು ಲೇವಡಿ ಮಾಡಿದರು.

ನೆರೆ ಸಂತ್ರಸ್ತರ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರವಾಹದಲ್ಲಿ ಸಂತ್ರಸ್ತರು ಮನೆ ಕಳೆದುಕೊಡಿದ್ದಾರೆ. ಇನ್ನು ಅವರಿಗೆ ಪರಿಹಾರ ಹಣ ನೀಡಿಲ್ಲ. ಇಂತವರಿಗೆ ಮತ ನೀಡದೆ ಕೆಲಸ ಮಾಡುವಂತಹ ಅಭ್ಯರ್ಥಿಗೆ ಮಯ ಹಾಕುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಇನ್ನು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಅನರ್ಹ ಶಾಸಕರು ವಿರುದ್ಧ ಆಕ್ರೋಶ ವ್ಯಕ್ತಪಡಿದರು.

ABOUT THE AUTHOR

...view details