ಚಿಕ್ಕೋಡಿ :ನನಗೆ ಕಾಂಗ್ರೆಸ್, ಬಿಜೆಪಿ ಮುಖಂಡರೂ ಸಂಪೂರ್ಣವಾಗಿ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದು, ನನ್ನ ಗೆಲವು ನಿಶ್ಚಿತ ಎಂದು ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಹೇಳಿದರು.
ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿರುವ ಹಿಂದಿನ ಎಲ್ಲ ಕಾರ್ಯಕರ್ತರು, ನಮ್ಮ ಅಭಿಮಾನಿಗಳು ಯಾವುದಕ್ಕೂ ವಿರೋಧ ಮಾಡುವುದಿಲ್ಲ. 14 ತಿಂಗಳ ಶಾಸಕರನ್ನು ನೋಡಿದ್ದೇವೆ. ನಿಮ್ಮನ್ನು 20 ವರ್ಷಗಳಿಂದ ನೋಡಿದ್ದೇವೆ. ಈ 14 ತಿಂಗಳ ಆಡಳಿತದಿಂದ ಬೇಸತ್ತಿದ್ದೇವೆ. ನಾವು ನಿಮಗೆ ಬೆಂಬಲ ನೀಡುವುದಾಗಿ ಮತದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಈ ಉಪಚುನಾವಣೆಯಲ್ಲಿ ಗೆದ್ದು ಬರುತ್ತೇನೆ ಎಂದರು.
ಶ್ರೀಮಂತ ಪಾಟೀಲ್ ಗುಂಡಾ ವರ್ತನೆ ಬಗ್ಗೆ ಪ್ರತಕ್ರಿಯಿಸಿ, ಗುಂಡಾ ವರ್ತನೆಯನ್ನು ನಾನು ನೋಡಿಲ್ಲ. ಟಿವಿ, ಪತ್ರಿಕಾ ಮಾಧ್ಯಮದಲ್ಲಿ ಬಂದಿದ್ದನ್ನು ನೋಡಿದ್ದೇನೆ. ಕೆಲ ರೈತರು ಬಂದು ಕಾಟಾದಲ್ಲಿ, ತೂಕದಲ್ಲಿ ವ್ಯತ್ಯಾಸ ಇದೆ ಎಂದು ಹೇಳಿದಾಗ, ರೈತರು ಹೋಗಿ ಕೇಳಿದಾಗ ಅವರ ಮೇಲೆ ಮಹಾರಾಷ್ಟ್ರದಿಂದ ಗುಂಡಾ ಕರೆಸಿ ರೈತರ ಮೇಲೆ ಹಲ್ಯೆ ಮಾಡಿದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ನಾನು ಅವರ ವಿರುದ್ಧ ಸ್ಪರ್ಧೆ ಮಾಡಿದವನು. ಅವರ ಬಗ್ಗೆ ಹೆಚ್ಚು ಮಾತನಾಡಲು ಹೊಗುವುದಿಲ್ಲ. ಜನರೇ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಪ್ರಕಾಶ ಹುಕ್ಕೇರಿ ಪ್ರಚಾರದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ನನ್ನ ಜೊತೆಗಿದ್ದಾರೆ. ನನ್ನ ಸಂಬಂಧಿಕರು ಅವರಿಗೆ ನನಗೆ ಯಾವುದೇ ವ್ಯತ್ಯಾಸ ಇಲ್ಲ. ಅವರಿಗೆ ಟಿಕೆಟ್ ನೀಡಿಲ್ಲ ಎಂದು ಮನಸ್ಸಿಗೆ ನೋವಾಗಿರಬಹುದು. ಆದರೆ ಅವರು ನಮ್ಮ ಜೊತೆಗೆ ಇರುತ್ತಾರೆ ಎಂದು ಹೇಳಿದರು.