ಕರ್ನಾಟಕ

karnataka

ETV Bharat / state

ಕತ್ತಿ-ಸವದಿ, ಜಾರಕಿಹೊಳಿ‌ ಬ್ರದರ್ಸ್ ಸಂಘರ್ಷ : ಎಲ್ಲರ ಚಿತ್ತ ಬಿಎಸ್‌ವೈ-ಅರುಣ್ ಸಿಂಗ್ ಭೇಟಿಯತ್ತ! - ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಗೆ ಭೇಟಿ

ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರವನ್ನು ಬೆಳಗಾವಿ ಹೊಂದಿದೆ. ಈ ಮೊದಲು ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ಪ್ರಭಾವಳಿ ಹೆಚ್ಚು ವರ್ಕೌಟ್ ಆಗುತ್ತಿತ್ತು. ಆದರೆ, ಕಳೆದೊಂದು ದಶಕದಿಂದ ಬೆಳಗಾವಿ ಬಿಜೆಪಿಯ ಭದ್ರಕೋಟೆಯಾಗಿದೆ. ಅತಿಹೆಚ್ಚು ಸ್ಥಾನ ಗೆಲ್ಲುವ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂಬ ಮಾತುಗಳು ಇವೆ. ಈ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಜಾಣ ನಡೆ ಅನುಸರಿಸುತ್ತಿದೆ..

ಬೆಳಗಾವಿಯಲ್ಲಿ ಕತ್ತಿ-ಸವದಿ, ಜಾರಕಿಹೊಳಿ‌ ಬ್ರದರ್ಸ್ ಸಂಘರ್ಷ
ಬೆಳಗಾವಿಯಲ್ಲಿ ಕತ್ತಿ-ಸವದಿ, ಜಾರಕಿಹೊಳಿ‌ ಬ್ರದರ್ಸ್ ಸಂಘರ್ಷ

By

Published : Apr 11, 2022, 7:16 PM IST

ಬೆಳಗಾವಿ :ಗಡಿ ಜಿಲ್ಲೆ ಬೆಳಗಾವಿಯ ಬಿಜೆಪಿ ನಾಯಕರ ಮಧ್ಯೆದ ಸಂಘರ್ಷ ತಾರಕಕ್ಕೇರುತ್ತಿದೆ‌. ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆ. ಕಮಲ ನಾಯಕರ ಈ ಕಲಹ ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದೆ‌. ಕತ್ತಿ-ಸವದಿ ಹಾಗೂ ಜಾರಕಿಹೊಳಿ‌ ಬ್ರದರ್ಸ್ ಮಧ್ಯೆದ ವೈಮನಸ್ಸು ದಿನ ಕಳೆದಂತೆ ಬಿಗಡಾಯಿಸುತ್ತಿದೆ. ಭಿನ್ನಮತ ಶಮನಕ್ಕೆ ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ನಾಳೆಯಿಂದ ಎರಡು ದಿನಗಳ ಕಾಲ ಬೆಳಗಾವಿಯಲ್ಲೇ ಠಿಕಾಣಿ ಹೂಡಲಿದ್ದಾರೆ.

ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರವನ್ನು ಬೆಳಗಾವಿ ಹೊಂದಿದೆ. ಈ ಮೊದಲು ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ಪ್ರಭಾವಳಿ ಹೆಚ್ಚು ವರ್ಕೌಟ್ ಆಗುತ್ತಿತ್ತು. ಆದರೆ, ಕಳೆದೊಂದು ದಶಕದಿಂದ ಬೆಳಗಾವಿ ಬಿಜೆಪಿಯ ಭದ್ರ ಕೋಟೆಯಾಗಿದೆ. ಅತಿಹೆಚ್ಚು ಸ್ಥಾನ ಗೆಲ್ಲುವ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂಬ ಮಾತುಗಳು ಸಹ ಇವೆ. ಈ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಜಾಣ ನಡೆ ಅನುಸರಿಸುತ್ತಿದೆ.

ಬಿಜೆಪಿ ನಾಯಕರ ಮಧ್ಯೆದ ಭಿನ್ನಾಭಿಪ್ರಾಯ ಬಗೆಹರಿಸಬೇಕು ಹಾಗೂ ಭಿನ್ನಮತ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂಬ ನಿಟ್ಟಿನಲ್ಲಿ ಸ್ಥಳೀಯ ನಾಯಕರಿಗೆ ಈ ಉಭಯ ನಾಯಕರು ಪಾಠ ಮಾಡಲಿದ್ದಾರೆ. ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ಕತ್ತಿ-ಸವದಿ ಹಾಗೂ ಜಾರಕಿಹೊಳಿ‌ ಬ್ರದರ್ಸ್ ಮಧ್ಯೆ ಪೈಪೋಟಿ ‌ನಡೆಯುತ್ತಿದೆ. ಬಿಜೆಪಿ ನಾಯಕರ ಬೆಳಗಾವಿ ಪ್ರವಾಸ ಯಶಸ್ವಿ ಆಗುವುದೇ ಎಂಬುವುದೇ ಸದ್ಯದ ಕುತೂಹಲ.

ವೈಮನಸ್ಸಿಗೆ ಕಾರಣಗಳೇನು?:ಜಿಲ್ಲಾ ರಾಜಕಾರಣದಲ್ಲಿ ದಶಕಗಳಿಂದ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬ ಒಂದೇ ಬಣದಲ್ಲಿತ್ತು. ಆದರೆ, ಕಳೆದ ವರ್ಷ ಡಿಸಿಸಿ ಬ್ಯಾಂಕ್ ಚುನಾವಣೆಯಿಂದ ಆರಂಭವಾದ ಎರಡು ಕುಟುಂಬಗಳ ಮಧ್ಯೆದ ಮುಸುಕಿನ ಗುದ್ದಾಟ ಇತ್ತೀಚೆಗೆ ಮುಗಿದ ಎಂಎಲ್‍ಸಿ ಚುನಾವಣೆಯಲ್ಲಿ ಸ್ಫೋಟಗೊಂಡಿತ್ತು.

ಹೀಗಾಗಿ, ಜಾರಕಿಹೊಳಿ ಬಣದೊಂದಿಗಿದ್ದ ಕತ್ತಿ ಸಹೋದರರು ಲಕ್ಷ್ಮಣ ಸವದಿ ಜೊತೆಗೂಡಿದ್ದಾರೆ. ಪರಿಣಾಮ ಉಮೇಶ ಕತ್ತಿ ಸಹೋದರ ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಆದರೆ, ಡಿಸಿಸಿ ಬ್ಯಾಂಕ್ ನೌಕರರನ್ನು ಹಾಗೂ ನಿರ್ದೇಶಕರನ್ನು ರಮೇಶ ಕತ್ತಿ ವಿರುದ್ಧ ಎತ್ತಿಕಟ್ಟುತ್ತಿರುವ ಆರೋಪಕ್ಕೆ ಜಾರಕಿಹೊಳಿ ಸಹೋದರರು ಗುರಿಯಾಗಿದ್ದಾರೆ.

ಈ ಬೆಳವಣಿಗೆಯು ಉಮೇಶ ಕತ್ತಿ ಅವರನ್ನು ಕೆರಳಿಸಿದೆ. ಪ್ರಮುಖ ಲಿಂಗಾಯತ ನಾಯಕರಾದ ಕತ್ತಿ, ಸವದಿ, ಜೊಲ್ಲೆ ಹಾಗೂ ಡಾ.ಪ್ರಭಾಕರ ಕೋರೆ ಒಂದಾಗಿದ್ದಾರೆ. ಹೀಗೆ ಆರಂಭವಾಗಿರುವ ವೈಮನಸ್ಸು ಇದೀಗ ವಿಕೋಪಕ್ಕೆ ತಿರುಗಿದ್ದು, ಬಿಜೆಪಿ ಸಂಘಟನೆಗೆ ದೊಡ್ಡ ಮಟ್ಟದಲ್ಲಿ ಹಿನ್ನಡೆಗೆ ಕಾರಣವಾಗಿದೆ. ಹೀಗಾಗಿ, ಸ್ವತಃ ಬಿಎಸ್‍ವೈ ಹಾಗೂ ಅರುಣ್ ಸಿಂಗ್ ಬೆಳಗಾವಿಗೆ ಬರಲಿದ್ದಾರೆ. ಬಿಜೆಪಿಯ ಹೈಕಮಾಂಡ್‍ನ ಈ ತಂತ್ರಕ್ಕೆ ಜಿಲ್ಲಾ ನಾಯಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದು ನೋಡಬೇಕಿದೆ.

ಪ್ರತ್ಯೇಕ ಮಾತುಕತೆ, ದೂರು-ಪ್ರತಿದೂರು :ಎರಡು ದಿನಗಳ ಕಾಲ ಬೆಳಗಾವಿಯಲ್ಲೇ ಠಿಕಾಣಿ ಹೂಡಲಿರುವ ಬಿಎಸ್‍ವೈ ಹಾಗೂ ಅರುಣ್‌ ಸಿಂಗ್ ಜಿಲ್ಲೆಯ ಇಬ್ಬರು ಸಂಸದರು, ಓರ್ವ ರಾಜ್ಯಸಭಾ ಸದಸ್ಯ, 13 ಬಿಜೆಪಿ ಶಾಸಕರ ಜೊತೆಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಬಳಿಕ ಪ್ರತ್ಯೇಕವಾಗಿ ಒಬ್ಬೊಬ್ಬರ ಜೊತೆಗೂ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ. ಈ ವೇಳೆ ದೂರು-ಪ್ರತಿದೂರು ನೀಡಲು ಜಾರಕಿಹೊಳಿ ಬಣ ಹಾಗೂ ಕತ್ತಿ ಬಣ ಸಿದ್ಧತೆಯಲ್ಲಿ ತೊಡಗಿದೆ.

ಇತ್ತ, ಸಚಿವ ಸಂಪುಟ ವಿಸ್ತರಣೆ ವೇಳೆ ರಮೇಶ ಜಾರಕಿಹೊಳಿಗೆ ಮಂತ್ರಿ ಸ್ಥಾನ ನೀಡದಂತೆಯೂ ಕೆಲವರು ದೂರು ನೀಡುವ ಸಾಧ್ಯತೆ ಇದೆ. ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಡುವುದಾದರೆ ಅಭಯ ಪಾಟೀಲ ಇಲ್ಲವೇ ಪಿ.ರಾಜೀವ್‍ಗೆ ನೀಡಿ. ಆದರೆ, ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು. ಎಂಎಲ್‍ಸಿ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಜಾರಕಿಹೊಳಿ ಬ್ರದರ್ಸ್ ಕಾರಣ. ಅಲ್ಲದೇ ತಮ್ಮ ಸಹೋದರ ಲಖನ್ ಗೆಲುವಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಜಾರಕಿಹೊಳಿ ಸೋಲಿಸಿದ್ದಾರೆ. ಬಿಜೆಪಿ ಮತಗಳನ್ನೇ ವಿಭಜಿಸಿದ್ದಾರೆ. ಹೀಗಾಗಿ, ಜಾರಕಿಹೊಳಿ ಕುಟುಂಬಕ್ಕೆ ಯಾವುದೇ ಸ್ಥಾನಮಾನ ನೀಡದಂತೆ ಎದುರಾಳಿಗಳು ಪಟ್ಟು ಹಿಡಿಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ವಿಧಾನಸಭೆ ಚುನಾವಣೆಗೆ ಬಿಜೆಪಿ ತಾಲೀಮು.. ರಾಜ್ಯದ ರೌಂಡ್ಸ್‌ಗೆ ಕಟೀಲ್-ಅರುಣ್‌ಸಿಂಗ್-ಸಿಎಂ ನೇತೃತ್ವದಲ್ಲಿ 3 ತಂಡ ರೆಡಿ..

ABOUT THE AUTHOR

...view details