ಕರ್ನಾಟಕ

karnataka

ETV Bharat / state

UP ಅತ್ಯಾಚಾರ ಸಂತ್ರಸ್ತೆಗೆ ಅಥಣಿಯಲ್ಲಿ ಶ್ರದ್ಧಾಂಜಲಿ - Athani Taluk of Belgaum district

ಉತ್ತರ ಪ್ರದೇಶದಲ್ಲಿ ಕಾಮುಕರಿಂದ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಸಂತ್ರಸ್ತೆಗೆ ಬೆಳಗಾವಿ ಅಥಣಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

fds
UP ಅತ್ಯಾಚಾರ ಸಂತ್ರಸ್ಥೆಗೆ ಅಥಣಿಯಲ್ಲಿ ಶ್ರದ್ದಾಂಜಲಿ

By

Published : Oct 3, 2020, 12:57 PM IST

ಅಥಣಿ: ಉತ್ತರ ಪ್ರದೇಶದಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟ ಸಂತ್ರಸ್ತೆಗೆ ಜೈ ಕರ್ನಾಟಕ ಸಂಘಟನೆ ವತಿಯಿಂದ ದೀಪ ಬೆಳಗಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದೇಶದ ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡನೀಯ. ಬಿಜೆಪಿ ಜನಪರ ಕಾಳಜಿ ಹೊಂದಿದೆ ಎಂದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ. ಆದರೆ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಉತ್ತರಪ್ರದೇಶ ಸರ್ಕಾರ ಮಲಗಿಕೊಂಡಿದೆ. ಈಗಲಾದರೂ ಎಚ್ಚೆತ್ತುಕೊಂಡು ದಲಿತ ಬಾಲಕಿಗೆ ನ್ಯಾಯ ಒದಗಿಸಿಕೊಡಬೇಕು.

UP ಅತ್ಯಾಚಾರ ಸಂತ್ರಸ್ತೆಗೆ ಅಥಣಿಯಲ್ಲಿ ಶ್ರದ್ಧಾಂಜಲಿ

ಈ ಘಟನೆ ಮಾನವ ಕುಲ ತಲೆತಗ್ಗಿಸುವಂತಹ ಕೃತ್ಯ. ಕೂಡಲೇ ಉತ್ತರಪ್ರದೇಶ ಸರ್ಕಾರ ಹೆಣ್ಣುಮಗಳ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವ ಕೆಲಸ ಮಾಡಬೇಕು. ಈ ನಮ್ಮ ದೇಶದಲ್ಲಿನ ಹೆಣ್ಣುಮಕ್ಕಳಿಗೆ ನೇರವಾಗಿ ಹೋರಾಡುವುದಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಸಂಘಟನೆ ಕಾರ್ತರ್ತರು ಅಸಮಾಧಾನ ಹೊರ ಹಾಕಿದ್ದಾರೆ.

ABOUT THE AUTHOR

...view details